Latest Kannada Nation & World
ವೀಕ್ಷಕರ ಆಸೆಗೆ ತಣ್ಣಿರೆರಚಿದ ಕೃಷ್ಣಂ ಪ್ರಣಯ ಸಖಿ; ಒಟಿಟಿಯಿಂದ ಗಣೇಶ್ ಸಿನಿಮಾ ದೂರ ದೂರ! ಹೀಗಿದೆ ಕಾರಣ

ಬಹುತಾರಾಗಣದ ಸಿನಿಮಾ
ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತವಿದೆ. ವೆಂಕಟ್ ರಾಮ್ ಪ್ರಸಾದ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿಜ್ ಈಶ್ವರ್ ಸಂಭಾಷಣೆ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನು ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ಶಶಿಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ಶ್ರುತಿ ಸೇರಿ ದೊಡ್ಡ ತಾರಾಗಣವಿದೆ.