Latest Kannada Nation & World
ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ- 5 ಕಾರಣಗಳು

2) ಬಿಜೆಪಿ ಪರ ಮಧ್ಯಮ ವರ್ಗ: ದೆಹಲಿಯ ಮಧ್ಯಮ ವರ್ಗದ ಜನರು ಬಿಜೆಪಿ ಪರ ನಿಂತರು. ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಪರವಾಗಿಯೇ ನಿಂತಿದ್ದರು. ವಿಧಾನ ಸಭಾ ಚುನಾವಣೆ ವೇಳೆ ಅವರು ಎಎಪಿ ಕಡೆಗೆ ವಾಲಲಿಲ್ಲ. ಶೇಕಡ 9 ರಷ್ಟು ಮತಗಳಿಕೆ ಕುಸಿತವಾಗಿರುವುದರಲ್ಲಿ ಇದನ್ನು ನಾವು ಗುರುತಿಸಬಹುದು. ಈ ಮಧ್ಯಮ ವರ್ಗದ ಮತದಾರರಲ್ಲಿ ಸರ್ಕಾರಿ ನೌಕರರು, ವ್ಯಾಪಾರಸ್ಥರು, ವೈದ್ಯಕೀಯ ಕ್ಷೇತ್ರದವರು, ಎಂಜಿನಿಯರ್, ಸಿಎಗಳು ಮುಂತಾದವರು ಸೇರಿಕೊಂಡಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಾದಾಗ ಸದಾ ಸಂತ್ರಸ್ತನಂತೆ ನಾಟಕೀಯ ನಡವಳಿಕೆ ತೋರಿಸುತ್ತಿದ್ದ ಅರವಿಂದ್ ಕೇಜ್ರಿವಾಲ್ ಅವರಿಂದ ಮಧ್ಯಮ ವರ್ಗ ಬಿಜೆಪಿ ಕಡೆಗೆ ಹೊರಳಿದೆ ಎಂದು ಕಿದ್ವಾಯಿ ವಿವರಿಸಿದರು.