Latest Kannada Nation & World
ಮತ್ತೆ ಬೆಲೆ ಏರಿಕೆ; ಮ್ಯಾಗಿ, ಬಿಸ್ಕಟ್, ಎಣ್ಣೆ, ಕಾಫಿ ಸೇರಿದಂತೆ ವಿವಿಧ ಉತ್ಫನ್ನಗಳ ಬೆಲೆ ಹೆಚ್ಚಳಕ್ಕೆ FMCG ನಿರ್ಧಾರ

ನವದೆಹಲಿ: ಉತ್ಪಾದನಾ ವೆಚ್ಚ ಮತ್ತು ಆಹಾರ ಹಣ ದುಬ್ಬರದಿಂದ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೇಗವಾಗಿ ಗ್ರಾಹಕರ ಕೈ ಸೇರುವ ಉತ್ಪನ್ನಗಳ (FMCG) ಲಾಭಾಂಶ ಕುಸಿದಿದೆ ಎಂದು ವರದಿಯಾಗಿದೆ. ಇದರಿಂದ ಹಲವು ಕಂಪನಿಗಳು ನಷ್ಟಗೊಂಡಿರುವ ಕಾರಣ ಬೆಲೆ ಏರಿಕೆಗೆ ಮುಂದಾಗಿವೆ. ಹೆಚ್ಯುಎಲ್, ಗೋದ್ರೆಜ್ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್ಸ್ (GCPL), ಮಾರಿಕೊ, ಐಟಿಸಿ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (TCPL) ಸೇರಿದಂತೆ ಹಲವು ಕಂಪನಿಗಳು ಬೆಲೆ ಏರಿಕೆ ಮಾಡಲು ಮುಂದಾಗಿವೆ. ತಾಳೆ ಎಣ್ಣೆ, ಕಾಫಿ ಬೀಜ ಹಾಗೂ ಕೋಕಾ ಸೇರಿದಂತೆ ಹಲವು ಕಚ್ಚಾ ಉತ್ಪನ್ನಗಳ ಬೆಲೆ ಏರಿಕೆಯಾಗುವುದು ಬೆಲೆ ಏರಿಕೆಗೆ ಪುಷ್ಟಿ ನೀಡಿದೆ. ಎಫ್ಎಂಸಿಜಿ ಒಟ್ಟು ಮಾರಾಟದ ಶೇ.65-68ರಷ್ಟು ಆದಾಯ ನಗರ ಭಾಗಗಳಿಂದ ಬರುತ್ತಿದೆ.