Latest Kannada Nation & World
ಇಂದು ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ; ಭಾರತೀಯರು ಈ ಒಟಿಟಿಯಲ್ಲಿ ಅಕಾಡೆಮಿ ಪ್ರಶಸ್ತಿಯ ನೇರ ಪ್ರಸಾರ ನೋಡಿ

ಭಾರತೀಯರು ಈ ಕಾರ್ಯಕ್ರಮವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಜನವರಿ 23ರ ಸಂಜೆ 7 ಗಂಟೆಗೆ ವೀಕ್ಷಿಸಬಹುದು. ಅಕಾಡೆಮಿಯ ಸ್ಯಾಮ್ಯುಯೆಲ್ ಗೋಲ್ಡ್‌ವಿನ್ ಥಿಯೇಟರ್‌ನಲ್ಲಿ ಆಸ್ಕರ್ ನಾಮನಿರ್ದೇಶಿತರ ಘೋಷಣೆ ನಡೆಯಲಿದೆ. ಆಸ್ಕರ್.ಕಾಂ, ಆಸ್ಕರ್ಸ್.ಆರ್ಗ್ ಮತ್ತು ಅಕಾಡೆಮಿಯ ಡಿಜಿಟಲ್ ಚಾನೆಲ್‌ಗಳಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಎಬಿಸಿಯ ಗುಡ್ ಮಾರ್ನಿಂಗ್ ಅಮೆರಿಕಾದಲ್ಲಿಯೂ ಈ ಕಾರ್ಯಕ್ರಮ ಪ್ರಸಾರವಾಗಲಿದೆ.