Latest Kannada Nation & World
iPhone; ಸಾಮಾನ್ಯ ಅಮೆರಿಕನ್ 21 ದಿನ ಹಣ ಉಳಿಸಿ ಐಫೋನ್ 14 ಪ್ರೋ ಮ್ಯಾಕ್ಸ್ ಖರೀದಿಸಬಲ್ಲ, ಭಾರತೀಯನಿಗೆ ಎಷ್ಟು ದಿನಬೇಕು
ಐಫೋನ್ 14 ಪ್ರೋ ಮ್ಯಾಕ್ಸ್; ಏನಿದು ಖರೀದಿ ಲೆಕ್ಕಾಚಾರ
ಆಪಲ್ ಐಫೋನ್ ಖರೀದಿಸುವ ಕನಸು ಕಾಣುತ್ತಿರುವ ಅನೇಕರು ಭಾರತದಲ್ಲಿದ್ದಾರೆ. ಐಫೋನ್ 16 ಪ್ರೊ ಸರಣಿ ಬಿಡುಗಡೆಯಾದ ಬಳಿಕ ಹಳೆಯ ಮಾದರಿಗಳ ದರ ಇಳಿಕೆ ಘೋಷಣೆಯಾಗಿದ್ದು, ಇದರಂತೆ ಯಾವ ದೇಶದಲ್ಲಿ ಎಷ್ಟು ದರ ಇದೆ ಎಂಬಿತ್ಯಾದಿ ವಿಚಾರ ತೀವ್ರ ಚರ್ಚೆಗೆ ಒಳಗಾಗಿದೆ. ಐ ಫೋನ್ ಪ್ರೊ ಮತ್ತು ಐಫೋನ್ ಪ್ರೊಮ್ಯಾಕ್ಸ್ ನಡುವಿನ ಬೆಲೆ ವ್ಯತ್ಯಾಸ 30 ಪ್ರತಿಶತ ತಲುಪಿರುವುದು ಇದಕ್ಕೆ ಕಾರಣ. ಈ ನಡುವೆ, ಎಕ್ಸ್ ಖಾತೆ ಬಳಕೆದಾರರೊಬ್ಬರು ವರ್ಷಕ್ಕೆ 60,000 ಡಾಲರ್ ದುಡಿಯುವ ಅಮೆರಿಕನ್ 21 ದಿನ ಹಣ ಉಳಿಸಿ ಐಫೋನ್ 14 ಪ್ರೊ ಮ್ಯಾಕ್ಸ್ ಖರೀದಿಸಬಲ್ಲ. ಅದುವೆ ಭಾರತದಲ್ಲಿ ವರ್ಷಕ್ಕೆ 6 ಲಕ್ಷ ವೇತನ ಪಡೆಯುವ ವ್ಯಕ್ತಿ ಐಫೋನ್ 14 ಪ್ರೊ ಮ್ಯಾಕ್ಸ್ ಖರೀದಿಸಬೇಕಾದರೆ 218 ದಿನ ಬೇಕು ಎಂಬುದರ ಕಡೆಗೆ ಗಮನಸೆಳೆದಿದ್ದಾರೆ.