Latest Kannada Nation & World
ಕಟಕ್ನಲ್ಲಿ ರೋಹಿತ್ ಶರ್ಮಾ ಅಟ್ಯಾಕ್; 2ನೇ ಏಕದಿನದಲ್ಲೂ ಇಂಗ್ಲೆಂಡ್ ಸೋಲಿಸಿ ಸರಣಿಗೆ ಮುತ್ತಿಕ್ಕಿದ ಭಾರತ

ರೋಹಿತ್ ಶರ್ಮಾ (119) ಅವರ ಶತಕ ವೈಭವದಿಂದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲೂ ಅಮೋಘ ಗೆಲುವು ಸಾಧಿಸಿದೆ. ಒಂದು ಪಂದ್ಯ ಬಾಕಿ ಇರುವಂತೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಟಿ20 ಸರಣಿ ಸೋಲಿನ ಬಳಿಕ ಒಡಿಐ ಸಿರೀಸ್ನಲ್ಲಿ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದ್ದ ಇಂಗ್ಲೆಂಡ್ ಉತ್ತಮ ಪ್ರದರ್ಶನ ನಡುವೆಯೂ ಮತ್ತೊಮ್ಮೆ ಮುಖಭಂಗಕ್ಕೆ ಒಳಗಾಗಿದೆ. ಕಟಕ್ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲೂ ನಾಲ್ಕು ವಿಕೆಟ್ಗಳಿಂದಲೇ ಜಯಭೇರಿ ಬಾರಿಸಿರುವ ಭಾರತ, ಇನ್ನೂ 33 ಎಸೆತಗಳನ್ನು ಉಳಿಸಿಯೇ ಚೇಸ್ ಮಾಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 49.5 ಓವರ್ಗಳಲ್ಲಿ 304 ರನ್ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತ 6 ವಿಕೆಟ್ ನಷ್ಟಕ್ಕೆ 44.3 ಓವರ್ಗಳಲ್ಲಿ 308 ರನ್ ಗಳಿಸಿತು.