Latest Kannada Nation & World
ಇಸ್ರೋ ಪ್ರೊಬಾ -3 ಉಡ್ಡಯನ ಡಿಸೆಂಬರ್ 5ಕ್ಕೆ ಮುಂದೂಡಿಕೆ, ಸೌರ ಕರೋನಾ ಗಗನನೌಕೆ ಮಿಷನ್ಗೆ ಏನಾಯ್ತು? ಇಲ್ಲಿದೆ ವಿವರ

Proba-3 mission: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ (ESA) ಪ್ರೊಬಾ -3 ಮಿಷನ್ನ ಉಡಾವಣೆಯನ್ನು ಇಂದು ಉಡಾವಣೆ ಮಾಡಬೇಕಿತ್ತು. ಆದರೆ, ಡಿಸೆಂಬರ್ 4ರಂದು ನಡೆಸಬೇಕಿದ್ದ ಈ ಮಿಷನ್ ಅನ್ನು ಡಿಸೆಂಬರ್ 5ಕ್ಕೆ ಮುಂದೂಡಲಾಗಿದೆ ಎಂದು ಇಸ್ರೋ ಘೋಷಿಸಿದೆ. ಹೊಸ ಉಡಾವಣಾ ಸಮಯವನ್ನು ಗುರುವಾರ, ಡಿಸೆಂಬರ್ 5 ರಂದು ಸಂಜೆ 4.12ಕ್ಕೆ ನಿಗದಿಪಡಿಸಲಾಗಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ -ಎಕ್ಸ್ಎಲ್) ರಾಕೆಟ್ ಮೂಲಕ ಈ ಉಡ್ಡಯನ ನಡೆಯಲಿದೆ. ಮಿಷನ್ನಲ್ಲಿ ಕಾಣಿಸಿದ ವೈಪರೀತ್ಯದಿಂದಾಗಿ ಉಡ್ಡಯನ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.