Latest Kannada Nation & World
ನಟ ಸುದೀಪ್ ಪಾಂಡೆ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಅಭಿಮಾನಿಗಳು

ನಟ ಸುದೀಪ್ ಪಾಂಡೆ ವಿಕ್ಟರ್ ಎಂಬ ಶೀರ್ಷಿಕೆಯ ಹಿಂದಿ ಚಲನಚಿತ್ರದಲ್ಲಿ ನಟಿಸಿದ್ದರು, ಆದರೆ ಆ ಚಿತ್ರ ಅಷ್ಟು ಹಿಟ್ ಆಗಲಿಲ್ಲ. ಬಾಕ್ಸ್ ಆಫಿಸ್ನಲ್ಲಿ ತೀವ್ರ ನಷ್ಟ ಅನುಭವಿಸುವಂತಾಗಿತ್ತು. ಹೀಗೆ ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದರಂತೆ. ಎಲ್ಲ ಸವಾಲುಗಳನ್ನು ಮೀರಿಸಿಯೂ ಬದುಕ ಛಲ ಅವರಲ್ಲಿತ್ತು, ಆದರೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಸ್ನೇಹಿತರೊಬ್ಬರು ಹೇಳಿಕೊಂಡಿದ್ದಾರೆ ಈ ಬಗ್ಗೆ ಮನಿ ಕಂಟ್ರೋಲ್ ವರದಿ ಮಾಡಿದೆ.