Latest Kannada Nation & World
ಸೋತು ಸುಣ್ಣವಾದ ಕಂಗುವ ಚಿತ್ರಕ್ಕೆ ಆಸ್ಕರ್ ಮೇಲೆ ಕಣ್ಣು; ರೇಸ್‌ನಲ್ಲಿ ಭಾರತದ ಯಾವೆಲ್ಲ ಸಿನಿಮಾಗಳಿವೆ?

1929ರಲ್ಲಿ ಆರಂಭವಾದ ಆಸ್ಕರ್ ಪ್ರಶಸ್ತಿ, ಸದ್ಯ 97ನೇ ಆವೃತ್ತಿಗೆ ಬಂದು ನಿಂತಿದೆ. ಇದೇ ವರ್ಷದ 2ರಂದು ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹೀಗಿರುವಾಗಲೇ ಸಿನಿಮಾ ಟ್ರೇಡ್ ಅನಾಲಿಸ್ಟ್ ಮನೋಬಾಲಾ ವಿಜಯಬಾಲನ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ಕಂಗುವ ಸಿನಿಮಾದ ಆಸ್ಕರ್ ಪ್ರವೇಶದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕಾಡೆಮಿ ಪ್ರಶಸ್ತಿ ಪಟ್ಟಿ ಹೊರಬಿದ್ದಿದ್ದು, ಅದರಲ್ಲಿ ಕಂಗುವವರ ಹೆಸರೂ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.