Latest Kannada Nation & World
ದರ್ಶನ್, ಯಶ್, ರಿಷಬ್, ರಕ್ಷಿತ್ ಶೆಟ್ಟಿ… ಈ ವರ್ಷ ಬೆಳ್ಳಿಪರದೆಯಿಂದ ದೂರ ಉಳಿದವರು ಯಾರ್ಯಾರು?

ಚಿತ್ರಗಳಿದ್ದರೂ ಬಿಡುಗಡೆ ಆಗಲಿಲ್ಲ
ಯಶ್, ದರ್ಶನ್, ರಕ್ಷಿತ್ ಮತ್ತು ರಿಷಬ್ ಶೆಟ್ಟಿ ಅಭಿನಯದ ಚಿತ್ರಗಳ್ಯಾವುವೂ ಈ ವರ್ಷ ಬಿಡುಗಡೆಗೆ ಇರಲಿಲ್ಲ. ಅವರೆಲ್ಲರೂ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಪ್ರಜ್ವಲ್ ದೇವರಾಜ್ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೆ ಇದ್ದರೂ, ಅವ್ಯಾವೂ ಬಿಡುಗಡೆ ಆಗಲಿಲ್ಲ ಎಂಬುದು ವಿಚಿತ್ರ. ಹೌದು, ಪ್ರಜ್ವಲ್ ಅಭಿನಯದ ‘ಮಾಫಿಯಾ’, ‘ಗಣ’ ಮತ್ತು ‘ರಾಕ್ಷಸ’ ಚಿತ್ರಗಳು ತಯಾರಾಗಿ ವರ್ಷದ ಮೇಲಾಗಿದೆ. ಆದರೆ, ಪ್ರಜ್ವಲ್ ಅಭಿನಯದ ಈ ಚಿತ್ರಗಳ ವ್ಯಾಪಾರವಾಗದ ಕಾರಣ ಚಿತ್ರತಂಡಗಳು ಬಿಡುಗಡೆ ಮಾಡಲಿಲ್ಲ. ಈ ಚಿತ್ರಗಳ ಹೊರತಾಗಿ, ಪ್ರಜ್ವಲ್ ಇನ್ನೂ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ‘ಚೀತಾ’. ಇನ್ನೊಂದು ‘ಕರಾವಳಿ’. ಈ ಚಿತ್ರಗಳ ಚಿತ್ರೀಕರಣ ಸಹ ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ವರ್ಷ ಪ್ರಜ್ವಲ್ ಅಭಿನಯದ ಮೂರಾದರೂ ಚಿತ್ರಗಳು ಬಿಡುಗಡೆ ಆಗುವ ಸಾಧ್ಯತೆ ಇದೆ.