Latest Kannada Nation & World
ರಾಷ್ಟ್ರಮಟ್ಟದಲ್ಲಿ ಮಿಂಚಿದ ಕಾಂತಾರ, ಉತ್ತಮ ಸಿನಿಮಾ ಹಾಗೂ ಉತ್ತಮ ನಟ ಪಟ್ಟ ಎರಡರ ಗರಿಮೆಯೂ ರಿಷಬ್ ಶೆಟ್ಟಿ ಮುಡಿಗೆ

ರಿಷಬ್ ಶೆಟ್ಟಿಯವರ ‘ಕಾಂತಾರ’ ಸಿನಿಮಾಕ್ಕೆ ಉತ್ತಮ ಸಿನಿಮಾ ಎಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿತ್ತು. ಈ ಸಲದ ಪ್ರಶಸ್ತಿಯಲ್ಲಿ ಕನ್ನಡದ ಕಾಂತಾರ ಎಲ್ಲ ಭಾಷೆಗಳನ್ನು ಮೀರಿ, ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಅದೇ ರೀತಿ ಇದೇ ಚಿತ್ರದ ನಟನೆಗೆ ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ನೀಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಿಷಬ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ ಕಾಂತಾರ ‘ 2022 ರಲ್ಲಿ ಬಿಡುಗಡೆಯಾದಾಗಿನಿಂದ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಹಾಗೇ ರಿಷಬ್ ಅವರ ಸಹಜ ಅಭಿನಯ ಜನರ ಮನ ಮುಟ್ಟಿದೆ.