Latest Kannada Nation & World
ಶ್ರೇಷ್ಠಾ, ತಾಂಡವ್‌ನನ್ನು ಆರತಿ ಮಾಡಿ ಮನೆಗೆ ಬರಮಾಡಿಕೊಂಡ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಮಗ ಆಯ್ಕೆ ಮಾಡಿದ ಹುಡುಗಿಯೇ ನನ್ನ ಸೊಸೆ ಎಂದ ಕುಸುಮಾ
ಶ್ರೇಷ್ಠಾ, ನನ್ನವಳು, ಇದು ನನ್ನ ಮನೆ, ಇನ್ಮುಂದೆ ಅವಳು ಇಲ್ಲೇ ಇರುತ್ತಾಳೆ ಎನ್ನುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಕುಸುಮಾ ಬರುತ್ತಾಳೆ. ಅಮ್ಮನನ್ನು ನೋಡಿ ತಾಂಡವ್ ಒಂದು ಕ್ಷಣ ಗಾಬರಿಯಾಗುತ್ತಾನೆ. ನಿಮ್ಮ ಮಗ ಮಾಡುತ್ತಿರುವ ಕೆಲಸ ನೋಡಿ ಎಂದು ಸುನಂದಾ ಹೇಳುತ್ತಾಳೆ. ಆದರೆ ಕುಸುಮಾ ವರಸೆ ಬದಲಿಸುತ್ತಾಳೆ. ನನ್ನ ಮಗ, ಅವಳು ಇಷ್ಟಪಟ್ಟ ಹುಡುಗಿಯನ್ನು ಮನೆಗೆ ಕರೆತಂದಿದ್ದಾನೆ. ಅವರನ್ನು ಹೀಗೆ ಹೊರಗೆ ನಿಲ್ಲಿಸಿ ಮಾತನಾಡಿಸುವುದು ಎಷ್ಟು ಸರಿ ಸುನಂದಾ ಎನ್ನುತ್ತಾಳೆ. ಕುಸುಮಾ ಮಾತು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ. ಕುಸುಮಾ, ಸೊಸೆಯನ್ನು ಕರೆಯುತ್ತಾಳೆ. ಭಾಗ್ಯಾ ಎಲ್ಲಾ ಗೊತ್ತಿದ್ದೂ ಏನೂ ಮಾತನಾಡದೆ, ಬಂದು ಸುಮ್ಮನೆ ನಿಲ್ಲುತ್ತಾಳೆ. ಎಲ್ಲಾ ರೆಡಿ ಇದೆಯಾ ಎಂದು ಕುಸುಮಾ ಕೇಳುತ್ತಾಳೆ. ಭಾಗ್ಯಾ ತಲೆ ಆಡಿಸುತ್ತಾ ಅಡುಗೆ ಮನೆಗೆ ಹೋಗುತ್ತಾಳೆ.