Latest Kannada Nation & World
ಚಾರುಗೆ ಕಾಟ ಕೊಡಲು ದೇವಸ್ಥಾನಕ್ಕೂ ಬಂದ್ಲು ವೈಶಾಖಾ; ಒಳ್ಳೆಯವರಿಗೆ ಇಲ್ಲಿ ಉಳಿಗಾಲವೇ ಇಲ್ಲ

ವೈಶಾಖಾಳದ್ದು ಕೆಟ್ಟ ಉದ್ದೇಶ
ಹೀಗಿರುವಾಗ ವೈಶಾಖಾ ಮನೆಯಲ್ಲೇ ಕುಳಿತುಕೊಂಡು, ನನ್ನ ಬಳಿ ದೇವಸ್ಥಾನಕ್ಕೆ ಬರೋಕೆ ಆಗೋದಿಲ್ಲ. ನಿನಗೇ ಗೊತ್ತು ನನ್ನ ಕಾಲು ಸರಿ ಇಲ್ಲ. ಆದರೆ ನನ್ನ ಕಾಲಿನ ಸಲುವಾಗಿ ನೀನು ನಾನು ಹೊತ್ತ ಹರಕೆಯನ್ನು ತೀರಿಸಬೇಕು ಎಂದು ಹೇಳಿರುತ್ತಾಳೆ. ಆಗ ಚಾರು ಖುಷಿಯಿಂದ ಅದನ್ನು ಒಪ್ಪಿಕೊಂಡಿರುತ್ತಾಳೆ. ಆದರೆ ಹರಕೆ ಮಾತ್ರ ಸರಳವಾದ ಹರಕೆ ಆಗಿರುವುದಿಲ್ಲ. ಉರುಳು ಸೇವೆ ಮಾಡಬೇಕು, ಮುಡಿ ಕೊಡಬೇಕು ಎಂದೆಲ್ಲ ಹೇಳಿರುತ್ತಾಳೆ. ಆದರೂ ಚಾರು ಅದೆಲ್ಲವನ್ನೂ ಒಪ್ಪಿಕೊಂಡಿರುತ್ತಾಳೆ.