Latest Kannada Nation & World
ಅಣ್ಣಯ್ಯನ ಮನೆಯಲ್ಲಿ ಮದುವೆ ಸಂಭ್ರಮ; ತಾಯಿ ಸ್ಥಾನದಲ್ಲಿ ನಿಂತು ರಶ್ಮಿಗೆ ಅರಶಿನ ಹಚ್ಚಿದ ಪಾರು

ಅಷ್ಟರಲ್ಲಿ ವೀರಭದ್ರ ಶಿವು ಮನೆಗೆ ಬರುತ್ತಾನೆ, ಅವನು ಬಂದ ತಕ್ಷಣವೇ ಕುಳಿತುಕೊಳ್ಳಲು ವ್ಯವಸ್ಥೆ ಮಾಡುತ್ತಾರೆ. ಮಾದಪ್ಪಣ್ಣ ಅಕ್ಕಂದಿರೆಲ್ಲಿ? ಎಂದು ಪ್ರಶ್ನೆ ಮಾಡುತ್ತಾನೆ. ಯಾಕೆಂದರೆ ವೀರಭದ್ರ ತನ್ನ ಇಬ್ಬರು ಹೆಂಡತಿಯರನ್ನು ಮನೆಯಲ್ಲೇ ಬಿಟ್ಟು ಬಂದಿರುತ್ತಾನೆ. ಶಿವುಗೂ ಇದರಿಂದ ಬೇಸರ ಆಗಿರುತ್ತದೆ. ಮಾದಪ್ಪಣ್ಣ ಕೇಳಿದ ಪ್ರಶ್ನೆಗೆ ವೀರಭದ್ರ ಉತ್ತರಿಸುತ್ತಾ ಇಲ್ಲ, ಅವಳ ತಂದೆಗೆ ಹುಷಾರಿಲ್ಲ. ಅವರು ಈಗಲೂ, ಆಗಲೋ ಸಾಯುವ ಹಂತದಲ್ಲಿದ್ದಾರಂತೆ ಎಂದು ಉತ್ತರಿಸುತ್ತಾನೆ, ಆ ಮಾತನ್ನು ಕೇಳಿ ಪಾರುಗೆ ಆತಂಕ ಆಗುತ್ತದೆ. “ಅಯ್ಯೋ! ನಾನು ಕೆಲಸದ ಗಡಿಬಿಡಿಯಲ್ಲಿ ಕಾಲ್ ಕೂಡ ಮಾಡಿಲ್ಲ” ಎನ್ನುತ್ತಾಳೆ. ಮಂಜಿ ತಕ್ಷಣವೇ ಈಗಲೂ ಕಾಲ ಮಿಂಚಿಲ್ಲ, ಒಮ್ಮೆ ಕಾಲ್ ಮಾಡು ಎನ್ನತ್ತಾಳೆ.