Astrology
ಅನಾರೋಗ್ಯ, ವೈವಾಹಿಕ ಜೀವನದಲ್ಲಿ ಅಡೆತಡೆಗಳನ್ನ ಎದುರಿಸುತ್ತಿದ್ದೀರಾ? ಪರಿಹಾರಕ್ಕಾಗಿ ಈ ಕೇತು ಮಂತ್ರ ಪಠಿಸಿ

ವೈದಿಕ ಜ್ಯೋತಿಷ್ಯದ ಪ್ರಕಾರ, ಕೇತುವನ್ನು ನೆರಳು ಗ್ರಹ ಎಂದು ಕರೆಯಲಾಗುತ್ತದೆ. ಇದು ಜನರ ಜೀವನದ ಮೇಲೆ ಹೆಚ್ಚಿನ ಪ್ರಭಾವವನ್ನು ತೋರಿಸುತ್ತದೆ. ನವಗ್ರಹಗಳಲ್ಲಿ ರಾಹು ಮತ್ತು ಕೇತು ಮಾತ್ರ ಯಾವಾಗಲೂ ಹಿಮ್ಮುಖ ಹಂತದಲ್ಲಿ ಸಾಗುತ್ತಾರೆ. ಕೇತುವಿನ ವರವಿದ್ದರೆ ಜೀವನದಲ್ಲಿ ನೆಮ್ಮದಿಗೆ ಕೊರತೆ ಇರುವುದಿಲ್ಲ. ಜಾತಕದಲ್ಲಿ ಕೇತು ದೋಷಗಳಿದ್ದರೆ ಅನಿರೀಕ್ಷಿತ ಸಮಸ್ಯೆಗಳು, ವೈವಾಹಿಕ ಜೀವನದಲ್ಲಿ ಅಡೆತಡೆಗಳು ಮತ್ತು ಮದುವೆಗೆ ತೊಂದರೆಗಳು ಉಂಟಾಗುತ್ತವೆ. ಇವುಗಳಿಂದ ಮುಕ್ತಿ ಹೊಂದಲು ಕೇತು ಸ್ತೋತ್ರವನ್ನು ಪಠಿಸುವುದು ತುಂಬಾ ಒಳ್ಳೆಯದು. ಕೇತು ಸ್ತೋತ್ರವನ್ನು ಸ್ಕಂದ ಪುರಾಣದಲ್ಲಿ ವಿವರಿಸಲಾಗಿದೆ. ಒಬ್ಬ ವ್ಯಕ್ತಿಯು ತಮ್ಮ ಜಾತಕ ಚಕ್ರದಲ್ಲಿ ಕೇತುವಿನ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಈ ಸ್ತೋತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಸವಾಲಿನ ಸನ್ನಿವೇಶವೂ ಸಕಾರಾತ್ಮಕವಾಗುತ್ತದೆ.