Latest Kannada Nation & World
ಅಮೇರಿಕಾದ 47ನೇ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿದ ಡೋನಾಲ್ಡ್ ಟ್ರಂಪ್

ಯುಎಸ್ ಮಾಜಿ ಅಧ್ಯಕ್ಷ ಜೋ ಬಿಡನ್ ಅವರ ಉತ್ತರಾಧಿಕಾರಿ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಮಾಣ ವಚನ ಸಮಾರಂಭಕ್ಕೂ ಮೊದಲು ಶ್ವೇತಭವನದಲ್ಲಿ ಭೇಟಿಯಾಗಿ ಶುಭಾಶಯ ತಿಳಿಸಿದ್ದರು. ಆ ನಂತರದಲ್ಲಿ ಅವರು ಅಲ್ಲಿಂದ ತೆರಳಿ, ಇಂದು ಜನವರಿ 20 ರಂದು ಯುನೈಟೆಡ್ ಸ್ಟೇಟ್ಸ್ನ 47 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಪ್ರಮಾಣ ಸಮಾರಂಭವು ಯುಎಸ್ ಕ್ಯಾಪಿಟಲ್ ಕಟ್ಟಡದ ರೋಟುಂಡಾದಲ್ಲಿ ನಡೆದಿದ್ದು ಅಲ್ಲೇ ಡೊನಾಲ್ಡ್ ತಮ್ಮ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇನ್ನು ಮುಂದೆ ಅಮೇರಿಕಾದ ಗೋಲ್ಡನ್ ಎರಾ ಆರಂಭವಾಗಲಿದೆ ಎಂದು ಹೇಳಿದ್ದಾರೆ.