Astrology
ಆಗಮ ಶಿಕ್ಷಣ ಪಡೆಯುವ ಆಸಕ್ತಿ ಇದೆಯಾ, ವಯಸ್ಸಿನ ಮಿತಿ ಇಲ್ಲ; ಕರ್ನಾಟಕದ ಮೈಸೂರು ಸೇರಿ 40 ಕಾಲೇಜುಗಳಲ್ಲಿ ಕಲಿಯುವ ಅವಕಾಶ

ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸುವ ಅರ್ಚಕರು ಕೇವಲ ಅರ್ಚಕರಾಗಿ ಮಾತ್ರ ಇರುವುದಿಲ್ಲ, ಅವಶ್ಯಕವಾದ ಜ್ಞಾನವನ್ನು ಅರ್ಚಕರು ಪಡೆದಿರಬೇಕಾಗುತ್ತದೆ. ಅರ್ಚಕರು ಸಂಸ್ಕೃತ ಭಾಷೆ, ವೇದಮಂತ್ರಗಳು, ರಾಮಾಯಣ ಮುಂತಾದವುಗಳ ಪ್ರಾರಂಭಿಕ ಪರಿಚಯ, ಜ್ಯೋತಿಷ ಮುಂತಾದ ಶಾಸ್ತ್ರಗಳ ಯಥೋಚಿತ ಜ್ಞಾನ ಇವುಗಳೆಲ್ಲವನ್ನೂ ಪಡೆದಿರಬೇಕಾಗುತ್ತದೆ. ಇದರ ಜೊತೆಗೆ ಅರ್ಚಕರು ತಮ್ಮಲ್ಲಿ ಸತ್ಯಪರತೆ, ಅನುಕಂಪ, ದಯೆ, ಸೌಜನ್ಯ, ಶೀಲವಂತಿಕೆ ಮುಂತಾದ ಸದ್ಗುಣಗಳನ್ನು ಅಳವಡಿಸಿ ಕೊಳ್ಳಬೇಕಾಗುತ್ತದೆ. ಹೀಗಿದ್ದಾಗ ಮಾತ್ರ ಅರ್ಚಕರು ಸಮಾಜಕ್ಕೆ ಒಳ್ಳೆಯ ಸೇವೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯಿಂದಲೇ ನಡೆಸಲಾಗುವ ಶಿಕ್ಷಣ ಪಡೆದುಕೊಳ್ಳಲು ಅವಕಾಶವಿದೆ.