Latest Kannada Nation & World
ಆಸೀಸ್ ನೆಲದಲ್ಲಿ ಜೈಸ್ವಾಲ್, ಕೆಎಲ್ ರಾಹುಲ್ ಬ್ಯಾಟಿಂಗ್ ಗೆ ಕಿಂಗ್ ಕೋಹ್ಲಿ ಫಿದಾ; ಮೈದಾನದಲ್ಲಿ ಸೆಲ್ಯೂಟ್ ಮಾಡಿದ ವೈರಲ್

ದಿನದ ಆಟದ ನಂತರ ತಮ್ಮದೇ ಆದ ಬ್ಯಾಟಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದ ಕೊಹ್ಲಿ, ದಿನದಾಟದ ಕೊನೆಯಲ್ಲಿ ಮೈದಾನಕ್ಕೆ ಬಂದು ಇಬ್ಬರಿಗೂ ಸೆಲ್ಯೂಟ್ ಮಾಡಿದ್ದಾರೆ. ಜೈಸ್ವಾಲ್ ಮತ್ತು ರಾಹುಲ್ ಅವರಿಗೆ ವಿರಾಟ್ ತಮ್ಮ ಬ್ಯಾಟ್ ಅನ್ನು ಮೇಲಕ್ಕೆತ್ತಿ ಸೆಲ್ಯೂಟ್ ಮಾಡುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ವೈರಲ್ ಆದ ಕೆಲವೇ ನಿಮಿಷಗಳಲ್ಲಿ ಕಾಪಿರೈಟ್ಸ್ ಕಾರಣದಿಂದ ವಿಡಿಯೊವನ್ನು ತೆಗೆದುಹಾಕಲಾಗಿದೆ.