Latest Kannada Nation & World
ಇದಪ್ಪ ಡಾ ರಾಜ್‌ಕುಮಾರ್ ಹವಾ ಅಂದ್ರೆ! ಚೀನಾ ಸೂಪರ್ ಮಾರ್ಕೆಟ್‌ನಲ್ಲಿ ಮೊಳಗಿದ ಅಣ್ಣಾವ್ರ ಗಂಧದ ಗುಡಿ ಚಿತ್ರದ ಹಾಡು VIDEO

Dr Rajkumar: ಚಂದನವನ ಕಂಡ ಮೇರು ನಟ ಡಾ ರಾಜ್‌ಕುಮಾರ್ ಕಾಲವಾಗಿ 20 ವರ್ಷಗಳಾಗುತ್ತ ಬಂತು, ಇಂದಿಗೂ ಅವರ ಸಿನಿಮಾಗಳು, ಆ ಸಿನಿಮಾಗಳ ಹಾಡುಗಳು ಕರುನಾಡಿಗರಿಗೆ ಇಷ್ಟ. ಟಿವಿಗಳಲ್ಲಿಯೂ ಅವರ ಸಿನಿಮಾಗಳು ಪ್ರಸಾರ ಕಾಣುತ್ತಿದ್ದರೆ, ಅರೇ ಕ್ಷಣವಾದರೂ ಕಣ್ಣು ಅತ್ತ ಕಡೆ ವಾಲುತ್ತದೆ. ಇನ್ನು ಬೆಂಗಳೂರಿನಲ್ಲಿ ಗಲ್ಲಿಗೊಂದರಂತೆ ಅವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದಾರೆ ಅಭಿಮಾನಿಗಳು. ಪುಣ್ಯ ಸ್ಮರಣೆ, ಹುಟ್ಟು ಹಬ್ಬದ ದಿನಗಳಲ್ಲಂತೂ ಇಡೀ ಬೆಂಗಳೂರು ರಾಜ್‌ಕುಮಾರ್ ಮಯವಾಗಿರುತ್ತದೆ. ಆದರೆ ಇದೇ ಅಣ್ಣಾವ್ರ ಹಾಡು ಗಿಜಿಗುಡುವ ಚೀನಾದಲ್ಲಿ ಕೇಳಿಸಿದರೆ ಹೇಗಿರಬಹುದು!