Latest Kannada Nation & World
ಇಬ್ರೂ ಥೇಟ್ ರಾಧಾ ಕೃಷ್ಣನ ಥರ ಇದ್ದೀರಾ; ಭವ್ಯಾ ಗೌಡಗೆ ಸಿಕ್ತು ತ್ರಿವಿಕ್ರಮ್ ತಾಯಿಯ ಕಾಂಪ್ಲಿಮೆಂಟ್

ಬಿಗ್ ಮನೆಗೆ ಅಮ್ಮಂದಿರ ಆಗಮನ
90 ದಿನಗಳ ಮೇಲಾದರೂ ಸ್ಪರ್ಧಿಗಳ ಕುಟುಂಬದವರು ಬಿಗ್ಬಾಸ್ ಮನೆಗೆ ಬಂದಿಲ್ಲ. ಇದೀಗ ಒಬ್ಬೊಬ್ಬರ ಆಗಮನವಾಗುತ್ತಿದೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಬಿಗ್ ಮನೆಗೆ ಸ್ಪರ್ಧಿಗಳ ಹೆತ್ತವರ ಆಗಮನವಾಗಿದೆ. ಮೊದಲಿಗೆ ಮುಖ್ಯ ದ್ವಾರದಿಂದ ಭವ್ಯಾ ಗೌಡ ಅವರ ತಾಯಿ ಆಗಮಿಸಿದರೆ, ಬಳಿಕ ತ್ರಿವಿಕ್ರಮ್ ಅವರ ತಾಯಿಯೂ ಆಗಮಿಸಿದ್ದಾರೆ. ಅಮ್ಮನ ಆಗಮನವಾಗುತ್ತಿದ್ದಂತೆ, ನಿಂತಲ್ಲಿಂದಲೇ ಇವರಿಬ್ಬರ ಕಣ್ಣಾಲಿಗಳಲ್ಲಿ ನೀರು ಜಿನುಗಿದೆ. ಆದರೆ, ಸ್ಪರ್ಧಿಗಳಿಗೆ ಅಮ್ಮನ ಭೇಟಿಗಾಗಿ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ.