Latest Kannada Nation & World
ಉಪೇಂದ್ರ ಅವರ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ‘UI’ ಒಟಿಟಿ ಸ್ಟ್ರೀಮಿಂಗ್ ಯಾವಾಗ? ಇಲ್ಲಿದೆ ಸಂಭಾವ್ಯ ದಿನಾಂಕ
ಯುಐ ಸಿನಿಮಾ ಬಗ್ಗೆ
2023 ರಲ್ಲಿತೆರೆಕಂಡ ಕಬ್ಜ ಬಳಿಕ ಉಪೇಂದ್ರ ಅವರ ಮೊದಲ ಹಾಗೂ 2024ರ ಕೊನೆಯ ಚಿತ್ರ ಯುಐ. ಇದು ಸಿನಿಮಾ ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಒಬ್ಬ ರಾಜ ಮತ್ತು ಅಸಾಧಾರಣ ವ್ಯಕ್ತಿಯ ನಡುವಿನ ಘರ್ಷಣೆಯನ್ನು ಕೇಂದ್ರೀಕರಿಸಿದೆ. ರಾಜ ಸರ್ವಾಧಿಕಾರಿಯಾಗಲು ಜನರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅಸಮಾನತೆ, ಜಾತಿ, ಧರ್ಮ, ದೇವರು, ಭ್ರಷ್ಟಾಚಾರ, ಬುದ್ಧ, ಬಸವ, ಚುನಾವಣೆ, ಪ್ರಜಾಪ್ರಭುತ್ವ, ಜ್ಯೋತಿಷ್ಯ, ಹೆಣ್ಣು ಹೀಗೆ ಹಲವಾರು ವಿಚಾರಗಳೊಂದಿಗೆ ಸಿನಿಮಾ ಸಾಗುತ್ತದೆ. ಈ ಚಿತ್ರವನ್ನು ಉಪೇಂದ್ರ ಅವರ ನಿರ್ದೇಶಿಸಿದ್ದಾರೆ. ತಾರಾಗಣದಲ್ಲಿ ಮುರಳಿ ಶರ್ಮಾ, ರೇಷ್ಮಾ ನಾಣಯ್ಯ, ಜಿಸ್ಶು ಹಾಗೂ ಸಾಧು ಕೋಕಿಲಾ ಇದ್ದಾರೆ. ಚಿತ್ರವನ್ನು 100 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.