Latest Kannada Nation & World
ಒಂದೇ ಲುಕ್‌ನಲ್ಲಿ ಅಲ್ಲು ಅರ್ಜುನ್- ಯಶ್, ಪುಷ್ಪನಿಗೆ ಕೆಜಿಎಫ್ ಸ್ಪೂರ್ತಿಯೇ? ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸ ಗುರುತಿಸಿ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾವು ಭಾರತದ ಚಿತ್ರಲೋಕದಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದ್ದು ಸುಳ್ಳಲ್ಲ. ಕೆಜಿಎಫ್ ಬಳಿಕ ಅಂತಹ ಸಾಕಷ್ಟು ಸಿನಿಮಾಗಳು ಬಂದಿವೆ. ವಿಶೇಷವಾಗಿ, ಅದೇ ರೀತಿಯ ಕತ್ತಲೆಕತ್ತಲೆ, ಕಪ್ಪು ಕಂದು ಛಾಯೆಯ ಸಾಕಷ್ಟು ಸಿನಿಮಾಗಳು ಬಂದಿವೆ. ಕೆಜಿಎಫ್‌ನಿಂದ ಸ್ಪೂರ್ತಿ ಪಡೆದು ಸಿನಿಮಾಗಳು ಸಾಕಷ್ಟು ಬಂದರೂ ಯಶಸ್ವಿಯಾಗಿರುವುದು ಕೆಲವೇ ಕೆಲವು ಮಾತ್ರ. ಪುಷ್ಪ ಸಿನಿಮಾದಲ್ಲಿಯೂ ಇದೇ ರೀತಿಯ ಸ್ಪೂರ್ತಿ ಇರುವುದೇ? ಪುಷ್ಪ 2ನಲ್ಲಿ ಕೆಜಿಎಫ್ ಶೇಡ್ ಇರುವುದೇ? ಕೆಜಿಎಫ್‌ನಲ್ಲಿ ಚಿನ್ನ, ಪುಷ್ಪದಲ್ಲಿ ರಕ್ತ ಚಂದನದ ಕಥೆಯಿದೆ. ಕೆಜಿಎಫ್ ಮತ್ತು ಪುಷ್ಪ ಸಿನಿಮಾದ ಈ ಪ್ರೇರೇಪಣೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.