Latest Kannada Nation & World
ಒಟಿಟಿಯಲ್ಲಿ ಸ್ಟ್ರೀಮ್ ಆಗ್ತಿದೆ ಡೆಡ್ಪೂಲ್ ಮತ್ತು ವೋಲ್ವರಿನ್; 11 ಸಾವಿರ ಕೋಟಿ ಕಲೆಕ್ಷನ್ ಮಾಡಿರುವ ಹಾಲಿವುಡ್ ಸಿನಿಮಾ ಇದು

ಐಎಂಡಿಬಿಯಲ್ಲಿ 7.8 ರೇಟಿಂಗ್ ದೊರೆತಿರುವ ಸಿನಿಮಾ
ಡೆಡ್ಪೂಲ್ ಅಂಡ್ ವೋಲ್ವರಿನ್ ಚಿತ್ರಕ್ಕೆ ಐಎಂಡಿಬಿಯಲ್ಲಿ 7.8 ರೇಟಿಂಗ್ ದೊರೆತಿದೆ. ಸಿನಿಮಾ, ಥಿಯೇಟರ್ಗಳಲ್ಲಿ ರಿಲೀಸ್ ಆಗಿ ಮೂರೂವರೆ ತಿಂಗಳ ನಂತರ ನವೆಂಬರ್ 12 ರ ಮಧ್ಯರಾತ್ರಿಯಿಂದ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇಂಗ್ಲೀಷ್ ಭಾಷೆಯ ಜೊತೆಗೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಸೂಪರ್ ಹೀರೋ ಚಿತ್ರಗಳ ವರ್ಗಕ್ಕೆ ಸೇರಿರುವ ಡೆಡ್ಪೂಲ್ ಮತ್ತು ವೊಲ್ವೆರಿನ್ ಸಿನಿಮಾದಲ್ಲಿ ವೈಜ್ಞಾನಿಕ ಕಾದಂಬರಿ, ಫ್ಯಾಂಟಸಿ, ಆಕ್ಷನ್, ಹಾಸ್ಯ ಮತ್ತು ಆಕ್ಷನ್ ಅಂಶಗಳಿವೆ.