Latest Kannada Nation & World
ಒಟಿಟಿಯಲ್ಲಿ ಹೊಸ ಸೆನ್ಸೇಷನ್; ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ಗೆ ಟಕ್ಕರ್ ಕೊಡಲು ವಿಲೀನದ ಮೊರೆ ಹೋದ ಅಂಬಾನಿ

ಪ್ರೈಮ್, ನೆಟ್‌ಫ್ಲಿಕ್ಸ್‌ಗೆ ಟಕ್ಕರ್
ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಒಟಿಟಿ ಕಂಪನಿಗಳು, ಕೋಟಿ ಕೋಟಿ ನೀಡಿ ಸಿನಿಮಾಗಳ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದವು. ಅದರಂತೆ, ಬಹುತೇಕ ಸಿನಿಮಾ, ಶೋ, ಸೇರಿ ಒರಿಜಿನಲ್‌ಗಳು ಈ ಒಟಿಟಿಯಲ್ಲಿಯೇ ಹೆಚ್ಚು ಸಿಗುತ್ತಿದ್ದವು. ಈಗ ಈ ಎರಡೂ ಕಂಪನಿಗಳಿಗೆ ಪೈಪೋಟಿಯಾಗಿ ಜಿಯೋ ಸ್ಟಾರ್ ಸೃಷ್ಟಿಯಾಗಿದೆ. ಈ ಮೂಲಕ ಸ್ಪರ್ಧೆ ಮತ್ತಷ್ಟು ಬಿರುಸಾಗಲಿದೆ. ಡಿಜಿಟಲ್ ಎಂಟರ್‌ಟೈನ್‌ಮೆಂಟ್ ಉದ್ಯಮದಲ್ಲಿ ಛಾಪು ಮೂಡಿಸಲು ಹೊಸ ಹೊಸ ಆವಿಷ್ಕಾರಕ್ಕೆ ಮುಂದಾಗುತ್ತಿರುವ ಮುಖೇಶ್ ಅಂಬಾನಿ, ಈ ಒಪ್ಪಂದದ ಹಿಂದೆ ದೊಡ್ಡ ಪ್ಲಾನ್‌ವೊಂದನ್ನು ರೂಪಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.