Astrology
ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವ ಮಹತ್ವವೇನು, ಈ ದಿನದ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ

ಕಾರ್ತಿಕ ಮಾಸ ಶುಕ್ಲಪಕ್ಷದ ದ್ವಾದಶಿ ದಿನದಂದು ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ. ಇದನ್ನು ಉತ್ಥಾನ ದ್ವಾದಶಿ, ಕ್ಷೀರಾಬ್ಧಿವ್ರತ ಮತ್ತು ಮಥನ ದ್ವಾದಶಿ ವ್ರತ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ತುಳಸಿ ಪೂಜೆಗೆ ವಿಶೇಷವಾದ ಮಹತ್ವವಿದೆ. ಇಂಗ್ಲೆಂಡ್ ಮತ್ತು ಸ್ಪೈನ್ ದೇಶದಲ್ಲಿ ಸಹ ತುಳಸಿ ಪೂಜೆ ಆಚರಣೆ ಇತ್ತೆಂದು ಚರಿತ್ರೆಯಿಂದ ತಿಳಿದುಬರುತ್ತದೆ. ತುಳಸಿ ಪೂಜೆಯಲ್ಲಿ ವಿಶೇಷ ರೀತಿ ಇಲ್ಲ. ಷೋಡಶೋಪಚಾರಗಳಿಂದ ತುಳಸಿಯನ್ನು ಅರ್ಚಿಸಬೇಕು. ಕಳಶ ಪೂಜೆಯಿಂದ ಆರಂಭವಾಗಿ ಪ್ರಾಣಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ವಸ್ತ್ರ ಇತ್ಯಾದಿಗಳಿಂದ ಸಂಪೂರ್ಣಗೊಳ್ಳುತ್ತದೆ. ಉತ್ಥಾನದ್ವಾದಶಿ ಆಚರಣೆಯ ಹಿಂದೆ ಎರಡು ಮೂರು ರೀತಿಯ ಕತೆಗಳಿವೆ.