Latest Kannada Nation & World

ಕ್ವಿಂಟನ್ ಡಿ ಕಾಕ್ 97, ಗೆಲುವಿನ ಖಾತೆ ತೆರೆದ ಕೆಕೆಆರ್; ರಾಜಸ್ಥಾನ್ ರಾಯಲ್ಸ್ ಸತತ ಎರಡನೇ ಸೋಲು

Share This Post ????

ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸಂಘಟಿತ ಹೋರಾಟ ನಡೆಸುವ ಮೂಲಕ ಇದೀಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸುವುದರೊಂದಿಗೆ ಐಪಿಎಲ್​ನಲ್ಲಿ ಗೆಲುವಿನ ಖಾತೆ ತೆರೆದಿದೆ. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತ ಬಿಟ್ಟುಕೊಟ್ಟು ಎಸ್​ಆರ್​ಹೆಚ್​ಗೆ ಶರಣಾಗಿದ್ದ ರಾಯಲ್ಸ್​​, ಸತತ ಎರಡನೇ ಸೋಲಿನ ಕಹಿ ಅನುಭವಿಸಿದೆ. ನಾಲ್ವರು ಬೌಲರ್​​ಗಳು ತಲಾ 2 ವಿಕೆಟ್ ಪಡೆಯುವುದರ ಜೊತೆಗೆ ಬ್ಯಾಟರ್​ ಕ್ವಿಂಟನ್ ಡಿ ಕಾಕ್​ ಆಕರ್ಷಕ 97 ರನ್​ ಬಲದಿಂದ ರಿಯಾನ್ ಪರಾಗ್ ಪಡೆಯನ್ನು 8 ವಿಕೆಟ್​ಗಳಿಂದ ಮಣಿಸಿದ ರಹಾನೆ ಪಡೆ 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 6 ಸ್ಥಾನ ಪಡೆದಿದೆ. 153 ರನ್ ಗುರಿ ಬೆನ್ನಟ್ಟಿದ ಕೆಕೆಆರ್, 17.3 ಓವರ್​​ಗಳಲ್ಲೇ ಗೆಲುವಿನ ಗೆರೆ ದಾಟಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!