Latest Kannada Nation & World
ಗಬ್ಬಾ ಟೆಸ್ಟ್ ಡ್ರಾ; ಭಾರತ ಡಬ್ಲ್ಯುಟಿಸಿ ಫೈನಲ್ ಪ್ರವೇಶ ಸಾಧ್ಯವೇ? ಹೀಗಿದೆ ಅರ್ಹತಾ ಸನ್ನಿವೇಶ
ಪಂದ್ಯ ಡ್ರಾ ಆಗಿರುವ ಹಿನ್ನೆಲೆಯಲ್ಲಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಕ್ಕೆ ತಲಾ 4 ಅಂಕಗಳನ್ನು ನೀಡಲಾಗಿದೆ. ಸದ್ಯ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದೆ. ಶೇಕಡಾವಾರು 63.33 ಅಂಕಗಳನ್ನು ಹೊಂದಿರುವ ಹರಿಣಗಳು, ಫೈನಲ್‌ಗೆ ಬಹುತೇಕ ಸಮೀಪವಿದೆ. 58.89 ಪಿಸಿಟಿ ಹೊಂದಿರುವ ಆಸೀಸ್ ಎರಡನೇ ಸ್ಥಾನದಲ್ಲಿದ್ದು, 55.88 ಅಂಕಗಳೊಂದಿಗೆ ಭಾರತ ತಂಡ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಫೈನಲ್ ರೇಸ್‌ನಿಂದ ಹೊರಬಿದ್ದಿದ್ದು, ಐದನೇ ಸ್ಥಾನದಲ್ಲಿರುವ ಶ್ರೀಲಂಕಾಗೆ ಇನ್ನೂ ಅವಕಾಶಗಳಿವೆ.