Latest Kannada Nation & World
ಚಾಂಪಿಯನ್ಸ್ ಟ್ರೋಫಿ ಗೊಂದಲದ ನಡುವೆ ಪಾಕಿಸ್ತಾನ ತಂಡಕ್ಕೆ ಭಾರೀ ಆಘಾತ; ಸೌತ್ ಆಫ್ರಿಕಾ ಸರಣಿಗೂ ಮುನ್ನ ಹೆಡ್ಕೋಚ್ ರಾಜೀನಾಮೆ

ಕ್ರಿಕ್ಬಜ್ ಈ ಬಗ್ಗೆ ವರದಿ ಮಾಡಿದ್ದು, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದರ ಬದಲಿಗೆ ಜೇಸನ್ ಗಿಲೆಸ್ಪಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕಳೆದೊಂದು ವರ್ಷದಿಂದ ಕೋಚಿಂಗ್ ಸಿಬ್ಬಂದಿ, ಸೆಲೆಕ್ಷನ್ ಕಮಿಟಿ, ತಂಡದ ನಾಯಕತ್ವ ಸೇರಿದಂತೆ ಮಹತ್ವದ ಬದಲಾವಣೆಗಳನ್ನು ಮಾಡಿರುವ ಪಿಸಿಬಿ ತನ್ನ ಆಘಾತಕಾರಿ ನಿರ್ಧಾರಗಳಿಂದ ವಿವಾದಗಳಿಗೆ ಕಾರಣವಾಗಿದೆ. ಇತ್ತೀಚೆಗೆ ವೈಟ್ಬಾಲ್ ತಂಡದ ಹೆಡ್ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರನ್ನು ವಜಾಗೊಳಿಸಿದ್ದ ಪಿಸಿಬಿ, ಇದೀಗ ಜೇಸನ್ ಗಿಲೆಸ್ಪಿ ಅವರ ಸೇವೆಯನ್ನೂ ಕಳೆದುಕೊಂಡಿದೆ.