Latest Kannada Nation & World
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ 2 ಸ್ಥಳಗಳೇಕೆ? ಲಾಹೋರ್-ದುಬೈ ನಡುವೆ ಎಲ್ಲಿ ನಡೆಯಲಿದೆ ಫೈನಲ್?
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (ICC Champions Trophy 2025) ವೇಳಾಪಟ್ಟಿ ಪ್ರಕಟವಾಗಿದೆ. ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಪಾಕಿಸ್ತಾನ ಮತ್ತು ಯುಎಇ ಆತಿಥ್ಯದಲ್ಲಿ ಟೂರ್ನಿ ನಡೆಯಲಿದ್ದು, ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿದಿವೆ. ಎರಡು ದೇಶಗಳ 4 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಆದರೆ, ಫೈನಲ್ ಪಂದ್ಯಕ್ಕಾಗಿ ಎರಡು ಮೈದಾನವನ್ನು ಆತಿಥ್ಯ ಸ್ಥಳವಾಗಿ ಇರಿಸಲಾಗಿದೆ. ದುಬೈ ಜೊತೆಗೆ ಪಾಕಿಸ್ತಾನದ ಲಾಹೋರ್ ಮೈದಾನವನ್ನು ಕೂಡಾ ಫೈನಲ್ಗೆ ಆತಿಥ್ಯ ಸ್ಥಳವಾಗಿ ಗುರುತಿಸಲಾಗಿದೆ. ಒಂದೇ ಪಂದ್ಯಕ್ಕೆ ಎರಡು ಸ್ಥಳ ಯಾಕೆ ಎಂಬುದು ಸದ್ಯದ ಪ್ರಶ್ನೆ. ಆದರೆ, ಭಾರತಕ್ಕಾಗಿಯೇ ಈ ನಿರ್ಧಾರಕ್ಕೆ ಬರಲಾಗಿದೆ.