Latest Kannada Nation & World
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್; ಮಿಥಾಲಿ ರಾಜ್, ಅಂಜುಮ್ ಚೋಪ್ರಾ ಪಟ್ಟಿಗೆ ಸೇರ್ಪಡೆ
115 ರನ್ ಹರ್ಲೀನ್ ಡಿಯೋಲ್ ಅವರ ವೃತ್ತಿಜೀವನದ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 77 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಅವರು ಒಟ್ಟಾರೆ ಏಕದಿನ ಕ್ರಿಕೆಟ್ನಲ್ಲಿ 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 436 ರನ್ ಸಿಡಿಸಿದ್ದಾರೆ. ಎರಡು ಅರ್ಧಶತಕ, 1 ಶತಕ ಅವರು ಸಿಡಿಸಿದ್ದಾರೆ. ಅವರು 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದೀಗ 6 ವರ್ಷಗಳ ನಂತರ ಮೊದಲ ಶತಕವನ್ನು ದಾಖಲಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಲೀನ್ ಅವರು ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಜೊತೆ 62 ರನ್ (75 ಎಸೆತ), ಹರ್ಮನ್ ಪ್ರೀತ್ ಕೌರ್ ಜೊತೆ 43 (41 ಎಸೆತ) ರನ್, ಜೆಮಿಮಾ ರೋಡ್ರಿಗಸ್ ಅವರೊಂದಿಗೆ 116 (71 ಎಸೆತ ರನ್ಗಳ ಜೊತೆಯಾಟವಾಡಿದರು.