Latest Kannada Nation & World

ತಮಿಳುನಾಡು ವಿಧಾನಸಭೆ ಚುನಾವಣೆಗೆ ಬಿಜೆಪಿ-ಎಐಎಡಿಎಂಕೆ ಮೈತ್ರಿ; ಅಮಿತ್‌ ಶಾ ಘೋಷಣೆ

Share This Post ????

Tamil Nadu assembly elections 2026: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಒಟ್ಟಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿವೆ.

ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಎಐಎಡಿಎಂಕೆ ಒಟ್ಟಾಗಿ ಹೋಗಲಿವೆ.

ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಎಐಎಡಿಎಂಕೆ ಒಟ್ಟಾಗಿ ಹೋಗಲಿವೆ. (PTI)

Tamil Nadu assembly elections 2026: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಎಐಎಡಿಎಂಕೆ ಒಟ್ಟಾಗಿ ಹೋರಾಡಲು ಮೈತ್ರಿ ಮಾಡಿಕೊಂಡಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಚೆನ್ನೈನಲ್ಲಿ ಈ ಘೋಷಣೆ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ನಿಟ್ಟಿನಲ್ಲಿ ಮಾತುಕತೆಗಳು ನಡೆದಿದ್ದರೂ ಪ್ರಕ್ರಿಯೆಗಳು ಅಂತಿಮವಾಗಿರಲಿಲ್ಲ. ಕಳೆದ ವಾರ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ನೀಡಿದಾಗಲೇ ಮೈತ್ರಿ ಖಚಿತ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈಗ ಅದು ಅಧಿಕೃತವಾಗಿದೆ. ಸರ್ಕಾರ ರಚನೆಯಾದ ನಂತರ ಸೀಟು ಹಂಚಿಕೆ ಮತ್ತು ಸಚಿವಾಲಯಗಳ ಹಂಚಿಕೆ ಎರಡನ್ನೂ ನಂತರ ನಿರ್ಧರಿಸಲಾಗುವುದು” ಎಂದು ಶಾ ಎಎನ್ಐಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಆಡಳಿತಾರೂಢ ಡಿಎಂಕೆ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಧರ್ಮ, ನೀಟ್ ಮತ್ತು ತ್ರಿಭಾಷಾ ನೀತಿಯ ಸಮಸ್ಯೆಗಳನ್ನು ಎತ್ತುತ್ತಿದೆ. ತಮಿಳುನಾಡಿನಲ್ಲಿ, ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಡಿಎಂಕೆ ಸನಾತನ ಧರ್ಮ ಮತ್ತು ತ್ರಿಭಾಷಾ ನೀತಿಯಂತಹ ಸಮಸ್ಯೆಗಳನ್ನು ತರುತ್ತಿದೆ” ಎಂದು ಶಾ ಹೇಳಿದರು.

ಉಭಯ ಪಕ್ಷಗಳ ನಡುವೆ ಮೈತ್ರಿ ಪೂರ್ವವಾಗಿ ಯಾವುದೇ ನಿರ್ದಿಷ್ಟ ಗುರಿಯ ಕುರಿತು ಮಾತುಕತೆ ಆಗಿಲ್ಲ. ಎಐಎಡಿಎಂಕೆಯ ಆಂತರಿಕ ವಿಷಯಗಳಲ್ಲಿ ಬಿಜೆಪಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ತಮಿಳುನಾಡಿನಲ್ಲಿ ಉಭಯ ಪಕ್ಷಗಳ ಸರ್ಕಾರ ರಚನೆಯಾಗಬೇಕಷ್ಟೇ ಎನ್ನುವುದು ನಮ್ಮ ಉದ್ದೇಶ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು. ನೀಟ್ ಮತ್ತು ತ್ರಿಭಾಷಾ ನೀತಿಯಂತಹ ವಿಷಯಗಳ ಬಗ್ಗೆ ಪಕ್ಷಗಳ ನಿಲುವು ಭಿನ್ನವಾಗಿದ್ದರೂ, ಪಾಲುದಾರರು ಕುಳಿತು ರಾಜ್ಯಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಚರ್ಚಿಸುತ್ತಾರೆ ಎಂದು ಅವರು ಹೇಳಿದರು.

ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಆಯ್ಕೆ

ಎಐಎಡಿಎಂಕೆ ಮಾಜಿ ಮುಖಂಡ ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿಜೆಪಿ ಆಯ್ಕೆ ಮಾಡಿದೆ. ಬಿಜೆಪಿ ಮತ್ತು ನಾಗೇಂದ್ರನ್ ಅವರ ಹಳೆಯ ಪಕ್ಷ ಎಐಎಡಿಎಂಕೆ ನಡುವಿನ ಮೈತ್ರಿ ಘೋಷಣೆಗೆ ಸ್ವಲ್ಪ ಮೊದಲು ಈ ಘೋಷಣೆಯಾಗಿದೆ.

2017 ರಲ್ಲಿ ಎಐಎಡಿಎಂಕೆಯಿಂದ ಪಕ್ಷಾಂತರ ಮಾಡಿದ ನೈನಾರ್ ನಾಗೇಂದ್ರನ್ ಅವರು ಫೈರ್ ಬ್ರಾಂಡ್ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರ ನಂತರ ತಮಿಳುನಾಡು ಬಿಜೆಪಿಯ 13 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ವರದಿಗಳ ಪ್ರಕಾರ, ನಾಗೇಂದ್ರನ್‌ ಮಾತ್ರ ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರಿಂದ ಅವರು ಮಾತ್ರ ಸ್ಪರ್ಧೆಯಲ್ಲಿದ್ದರು.

ದ್ರಾವಿಡ ರಾಜಕೀಯದ ಪ್ರಾಬಲ್ಯವಿರುವ ತಮಿಳುನಾಡು ರಾಜ್ಯದಲ್ಲಿ ಬಿಜೆಪಿ ಪ್ರವೇಶಿಸಲು ಪ್ರಯತ್ನಿಸುತ್ತಿರುವುದರಿಂದ, ನೈನಾರ್ ನಾಗೇಂದ್ರನ್ ಅವರು ಈ ಪ್ರದೇಶದ ರಾಜಕೀಯದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಗೆ ಪಕ್ಷವನ್ನು ಮುನ್ನಡೆಸುವ ಕಠಿಣ ಕೆಲಸವನ್ನು ಎದುರಿಸಲಿದ್ದಾರೆ. ಈಗ ರಾಜ್ಯದ ಪ್ರಮುಖ ವಿರೋಧ ಪಕ್ಷದೊಂದಿಗಿನ ಪುನರ್ಮಿಲನದೊಂದಿಗೆ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಬಿಜೆಪಿ ಸಜ್ಜಾಗಿದೆ.

ಈ ಹಿಂದೆಯೂ ಹಲವು ಬಾರಿ ಎಐಎಡಿಎಂಕೆಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡ ಉದಾಹರಣೆಯಿದೆ. ಕಳೆದ ಲೋಕಸಭೆ ಚುನಾವಣೆ ವೇಳೆಯೇ ಒಪ್ಪಂದ ಆಗಬೇಕಾಗಿತ್ತಾದರೂ ಎಐಎಡಿಎಂಕೆಯಲ್ಲೇ ಬಣ ರಾಜಕೀಯ ಜೋರಾಗಿತ್ತು. ಪನ್ನೀರ್‌ ಸೆಲ್ವಂ ಹಾಗೂ ಎಡಪ್ಪಾಡಿ ಪಳನಿಸ್ವಾಮಿ ನಡುವೆ ಸಂಘರ್ಷ ನಡೆದು ಕೊನೆಗೆ ನ್ಯಾಯಾಲಯವೇ ಪಳನಿಸ್ವಾಮಿ ಅವರನ್ನೇ ಅಧಿಕೃತವಾಗಿ ಪಕ್ಷದ ಉಸ್ತುವಾರಿ ಎಂದು ಘೋಷಿಸಿತ್ತು. ಇದರೊಟ್ಟಿಗೆ ಅಣ್ಣಾಮಲೈ ಹಾಗೂ ಪಳನಿಸ್ವಾಮಿ ನಡುವೆಯೂ ಭಿನ್ನಾಭಿಪ್ರಾಯಗಳು ಇದ್ದುದರಿಂದ ಬಹಿರಂಗ ಹೇಳಿಕೆಗಳ ಮೂಲಕ ಟೀಕಾಪ್ರಹಾರ ನಡೆದಿತ್ತು. ಈಗ ಮೈತ್ರಿ ಮಾತುಕತೆ ಅಂತಿಮಗೊಂಡಿದ್ದು. ಸೀಟು ಹಂಚಿಕೆ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಆಗಬಹುದು ಎಂದು ಮೂಲಗಳು ತಿಳಿಸಿವೆ.

ಕುಂದೂರು ಉಮೇಶಭಟ್ಟ ಪಿ.ಎಚ್.: ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. ‘ಕಾಡಿನ ಕಥೆಗಳು’ ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

Whats_app_banner

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!