Latest Kannada Nation & World
ದೆಹಲಿ ಗದ್ದುಗೆ ಬಿಜೆಪಿಗೆ; ಮತದಾರರಿಗೆ ಬಿಜೆಪಿ ಕೊಟ್ಟಿರುವ ಗ್ಯಾರೆಂಟಿಗಳಿವು, ಆರೋಗ್ಯ, ಶಿಕ್ಷಣ, ಸಿಲಿಂಡರ್ ಇನ್ನೂ ಎಷ್ಟೋ ಫ್ರೀ ಫ್ರೀ ಫ್ರೀ

ನವದಹಲಿ: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 70 ಸ್ಥಾನಗಳ ಪೈಕಿ 40 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ, ತಾನು ನೀಡಿದ ಚುನಾವಣಾ ಭರವಸೆಗಳನ್ನು ಈಡೇರಿಸುವ ಕಡೆಗೆ ಗಮನಹರಿಸಬೇಕಾಗಿದೆ. ದೆಹಲಿ ಮತದಾರರಿಗೆ ಬಿಜೆಪಿ, ಆರೋಗ್ಯ, ಶಿಕ್ಷಣ, ಎಲ್‌ಪಿಜಿ ಸಿಲಿಂಡರ್ ಸೇರಿ ಹತ್ತಾರು ಉಚಿತ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಅವುಗಳನ್ನು ದಾಖಲಿಸಿದ್ದು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಫ್ರೀ ಫ್ರೀ ಫ್ರೀ ಎಂದು ಬಿಜೆಪಿ ದೆಹಲಿಯಲ್ಲಿ ಮತದಾರರನ್ನು ಓಲೈಸಲು ಘೋಷಿಸಿತ್ತು.