Latest Kannada Nation & World
ದೆಹಲಿ ಚುನಾವಣಾ ವೇಳಾಪಟ್ಟಿ ಪ್ರಕಟ, ಫೆಬ್ರವರಿ 5ಕ್ಕೆ ಮತದಾನ, 8ಕ್ಕೆ ಫಲಿತಾಂಶ

ದೆಹಲಿ ವಿಧಾನಸಭಾ ಚುನಾವಣೆ, ಮತದಾರರು ಮತ್ತು ಮತಗಟ್ಟೆ ಸಂಖ್ಯೆ ವಿವರ
ದೆಹಲಿಯ ಒಟ್ಟು ಮತದಾರರ ಸಂಖ್ಯೆ 1.55 ಕೋಟಿ ಇದ್ದು, ಈ ಪೈಕಿ 83.49 ಲಕ್ಷ ಪುರುಷ ಮತದಾರರು, 71.74 ಲಕ್ಷ ಮಹಿಳಾ ಮತದಾರರು ಇದ್ದಾರೆ. 25.89 ಲಕ್ಷ ಯುವ ಮತದಾರರು. 2.08 ಲಕ್ಷ ಮತದಾರರು ಮೊದಲ ಬಾರಿ ಮತದಾನ ಮಾಡಲಿದ್ದಾರೆ. ಮತದಾರರ ಪೈಕಿ 79,436 ಮತದಾರರು ಅಂಗವೈಕಲ್ಯ ಹೊಂದಿದವರು. 85 ವರ್ಷ ಮೇಲ್ಪಟ್ಟವರು 1.09 ಲಕ್ಷ ಮತದಾರರಿದ್ದಾರೆ. ಅವರಿಗೆ ಮತದಾನ ಪ್ರಕ್ರಿಯೆ ಸುಲಭಗೊಳಿಸುವುದಕ್ಕೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗುತ್ತದೆ.