Latest Kannada Nation & World
ನನ್ನನ್ನು ಸೃಷ್ಟಿ ಮಾಡಿದ ದೇವರನ್ನು ತುಳಿಯುವುದಿಲ್ಲ, ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ- ನಟ ಉಪೇಂದ್ರ ಉವಾಚ
ನನ್ನನ್ನು ಸೃಷ್ಟಿ ಮಾಡಿದ ದೇವರನ್ನು ನಾನು ತುಳಿಯುವುದಿಲ್ಲ, ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ ಎಂಬ ಡೈಲಾಗ್ ನಾನಾ ಅರ್ಥ ಹೊಂದಿರಬಹುದು. ನಿಜವಾದ ದೇವರ ಮೇಲೆ ನನಗೆ ನಂಬಿಕೆ ಇದೆ. ಆದರೆ, ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ವಿವಿಧ ಸ್ಥಳಗಳಲ್ಲಿ ಕೃತಕವಾಗಿ ಸೃಷ್ಟಿಸಿದ ದೇವರು, ದೇವಸ್ಥಾನಗಳ ಮೇಲೆ ನನಗೆ ನಂಬಿಕೆ ಇಲ್ಲ ಎಂದೂ ಇದನ್ನು ಅರ್ಥ ಮಾಡಿಕೊಳ್ಳಬಹುದು. ನನ್ನನ್ನು ಸೃಷ್ಟಿ ಮಾಡಿದ ಪ್ರಕೃತಿ ದೇವರ ಮೇಲೆ ನನಗೆ ನಂಬಿಕೆಯಿದೆ. ಆದರೆ, ನಾನೇ ಸ್ವತಃ ಸೃಷ್ಟಿಸಿರುವ ದೇವರನ್ನು ತುಳಿಯಬಲ್ಲೆ ಎಂದಿರಬಹುದು.