Latest Kannada Nation & World
ನಿನಗಿಂತ ಚಿಕ್ಕ ಹುಡುಗನನ್ನು ಮದುವೆ ಆಗಿದ್ದೀಯ ಏನೂ ಅನ್ನಿಸ್ತಿಲ್ವಾ, ಭಾವನಾ ಮೇಲೆ ಸಿಡುಕಿದ ರೇಣುಕಾ; ಲಕ್ಷ್ಮೀ ನಿವಾಸ ಧಾರಾವಾಹಿ

ನಿನಗೆ ಹೇಳಿದರೆ ಏನು ಪ್ರಯೋಜನ? ನಿನ್ನ ಜೊತೆ ಬಂದಿದ್ದಾಳಲ್ಲ ಇವಳಿಗೆ ಹೇಳಬೇಕು, ಇವನಿಗೆ ಬುದ್ಧಿ ಇಲ್ಲ, ನಿನಗಿಂತ ಚಿಕ್ಕ ಹುಡುಗನನ್ನು ಮದುವೆ ಆಗಿ ಊರೆಲ್ಲಾ ಸುತ್ತುತ್ತಿದ್ದೀಯ ನಿನಗೆ ಏನೂ ಅನ್ನಿಸುವುದಿಲ್ಲವಾ, ಈ ತಾಳಿ ತೆಗೆದು ನಿನ್ನ ತಂದೆ ಮನೆಗೆ ವಾಪಸ್ ಹೋಗು ಎಂದು ರೇಣುಕಾ, ಭಾವನಾ ಮೇಲೆ ಕೋಪಗೊಳ್ಳುತ್ತಾಳೆ. ಭಾವನಾ ಏನೂ ಮಾತನಾಡದೆ ಅಳ್ಳುತ್ತಾ ಅಲ್ಲಿಂದ ಹೋಗುತ್ತಾಳೆ. ಅವರಿಗೆ ಏನೂ ಹೇಳಬೇಡ, ಪ್ರತಿಯೊಂದಕ್ಕೂ ಅವರನ್ನು ಏಕೆ ಬೈಯ್ಯುತ್ತೀಯ ಎಂದು ಸಿದ್ದು ತಾಯಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ.