Astrology
ನಿಪುಣಯೋಗಕ್ಕೂ ರವಿಯಂತ್ರಕ್ಕೂ ಇರುವ ಸಂಬಂಧವೇನು, ರವಿ ಯಂತ್ರ ಧರಿಸುವುದರಿಂದ ಯಾವ ರಾಶಿಗೆ ಅನುಕೂಲ; ಇಲ್ಲಿದೆ ವಿವರ

ರವಿ ಯಂತ್ರವನ್ನು ಧರಿಸುವುದರಿಂದ ಯಾವ ರಾಶಿಯವರಿಗೆ ಅನುಕೂಲ?
ಮೇಷ ಲಗ್ನ ಅಥವಾ ರಾಶಿಯಲ್ಲಿ ಜನಿಸಿದವರ ಕುಂಡಲಿಯಲ್ಲಿ ರವಿ ಮತ್ತು ಬುಧ ಗ್ರಹಗಳು ಮೀನ ರಾಶಿಯಲ್ಲಿ ಇದ್ದಲ್ಲಿ, ಬುದ್ಧಿವಂತಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಾನಸಿಕ ಚಿಂತೆ ಇರುವ ಕಾರಣ ಆತ್ಮವಿಶ್ವಾಸವು ಕಡಿಮೆಯಾಗುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಕಾಣುವುದಿಲ್ಲ. ಬಂಧು-ಬಳಗದವರ ಜೊತೆಯಲ್ಲಿ ಉತ್ತಮ ಒಡನಾಟ ಇರುವುದಿಲ್ಲ. ಆದ್ದರಿಂದ ಇವರು ಸೂರ್ಯನ ಯಂತ್ರವನ್ನು ಪೂಜಿಸುವುದು ಒಳ್ಳೆಯದು. ತಾಮ್ರದ ತಗಡಿನಲ್ಲಿ ರಚಿಸಿರುವಂತಹ ಯಂತ್ರವನ್ನು ಪೂಜಿಸಿದರೆ ಧೈರ್ಯ ಹೆಚ್ಚುತ್ತದೆ. ಆತ್ಮವಿಶ್ವಾಸದ ಕೊರತೆಯು ದೂರವಾಗುತ್ತದೆ. ಸೋಲಿನ ಸಂದರ್ಭದಲ್ಲಿಯೂ ಛಲಬಿಡದೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ತಮ್ಮ ಗುರಿ ತಲುಪಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ.