Latest Kannada Nation & World
ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ?! ದಡ್ಡ ವಿವಾದದ ಕುರಿತು ನಟ ಉಪೇಂದ್ರ ಆಶ್ಚರ್ಯಕರ ಪ್ರಶ್ನೆ
UI Movie: ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದು ಹೋಗಿ ಎಂದು ಯುಐ ಸಿನಿಮಾದ ಆರಂಭದಲ್ಲಿ ತೋರಿಸಿರುವ ಕುರಿತು ಎಲ್ಲರೂ ಚರ್ಚಿಸುತ್ತಿದ್ದಾರೆ. ಇದೀಗ ನಟ ಉಪೇಂದ್ರ ಇದೇ ರೀತಿಯ ಇನ್ನೊಂದು ಡೈಲಾಗ್‌ನ ಫೋಟೋ ಹಂಚಿಕೊಂಡಿದ್ದು, “ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ” ಎಂದು ಆಶ್ವರ್ಯದಿಂದ ಪ್ರಶ್ನಿಸಿದ್ದಾರೆ. “ನಿಜವಾದ ಬುದ್ದಿವಂತರು ದಡ್ಡರ ತರಹ ಇರ್ತಾರೆ. ಆದ್ರೆ, ದಡ್ಡರು ತಾವು ಬುದ್ದಿವಂತರು ಅಂತ ಎಗರಾಡ್ತಿರ್ತಾರೆ” ಎಂಬ ಸಾಲನ್ನು ಹಂಚಿಕೊಂಡಿದ್ದಾರೆ. ಯುಐ ಸಿನಿಮಾದಲ್ಲಿ ಈ ಸಾಲಗಳು ಕೂಡ ಇದ್ದವು. ಅಂದರೆ, ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದು ಹೋಗಿ ಎಂಬ ಸೂಚನೆಗೆ ಅದೇ ಸಿನಿಮಾದ ಪರದೆಯಲ್ಲೇ ಉತ್ತರ ನೀಡಲಾಗಿತ್ತು. ಆದರೆ, ಯುಐ ಸಿನಿಮಾ ದಡ್ಡರಿಗೆ ಮಾತ್ರ ಎನ್ನುವುದೇ ಚರ್ಚೆಯಾಗಿದೆ.