Latest Kannada Nation & World
ಪಾಕಿಸ್ತಾನದ ಮೇಲೆ ಭಾರತದ ಮೊದಲ ವೈಮಾನಿಕ ದಾಳಿಯ ರೋಚಕತೆ; ಸ್ಕೈ ಫೋರ್ಸ್ ಚಿತ್ರದ ಟ್ರೇಲರ್ ಬಿಡುಗಡೆ

Sky Force Trailer: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಸ್ಕೈ ಫೋರ್ಸ್ ಚಿತ್ರದ ಟ್ರೇಲರ್ ಇಂದು (ಜ 5) ಬಿಡುಗಡೆಯಾಗಿದೆ. ಅಕ್ಷಯ್ ಕುಮಾರ್, ನಿಮ್ರತ್ ಕೌರ್, ಸಾರಾ ಅಲಿ ಖಾನ್ ಮತ್ತು ಶರದ್ ಕೇಳ್ಕರ್ ಅವರನ್ನು ಹೊರತುಪಡಿಸಿ, ಈ ಸಿನಿಮಾ ಮೂಲಕ ವೀರ್ ಪಹಾಡಿಯಾ ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಪಾಕಿಸ್ತಾನದ ಮೇಲೆ ಭಾರತದ ಮೊದಲ ವೈಮಾನಿಕ ದಾಳಿ ಮತ್ತು ಮಿಷನ್ನಲ್ಲಿ ಕಾಣೆಯಾದ ಭಾರತೀಯ ವಾಯುಪಡೆಯ ಸೈನಿಕನ ಕಥೆ ಈ ಚಿತ್ರದ ಎಳೆ. ಇನ್ನೇನು ಇದೇ ಜ 24ರಂದು ಗಣರಾಜ್ಯೋತ್ಸವದ ಪ್ರಯುಕ್ತ ಈ ಸಿನಿಮಾ ತೆರೆಗೆ ಬರುತ್ತಿದೆ.