Latest Kannada Nation & World
ಪುಷ್ಪ 2ನಲ್ಲಿ ಕಿಸ್ಸಿಕ್ ಎಂದು ಸೊಂಟ ಬಳುಕಿಸಿದ ವಯ್ಯಾರಿ ಯಾರು? 23 ವರ್ಷ ವಯಸ್ಸಿನಲ್ಲೇ ದೇಶದ ಗಮನ ಸೆಳೆದ ಕಿಸ್ ನಟಿ

ಐಟಂ ಹಾಡಿಗಾಗಿ ಸಾಮಾನ್ಯವಾಗಿ ಚಿತ್ರತಂಡವು ಮಧ್ಯ ವಯಸ್ಕ ನಟಿಯರನ್ನು ಆಯ್ಕೆ ಮಾಡುತ್ತದೆ. ಅಂದರೆ, ಚಿತ್ರರಂಗದಲ್ಲಿ ಈಗಾಗಲೇ ಪಳಗಿರುವ, ಅನುಭವಿ ಡ್ಯಾನ್ಸರ್‌ಗಳಿಗೆ ಆದ್ಯತೆ ನೀಡುತ್ತಾರೆ. ಆದರೆ, ಕರ್ನಾಟಕ ಮೂಲದ ಶ್ರೀಲೀಲಾ ಇನ್ನೂ 23 ವರ್ಷ ವಯಸ್ಸಿನ ಯುವತಿ. ಹಲವು ಸಿನಿಮಾಗಳಲ್ಲಿ ನಟಿಸಿ ಪ್ರತಿಭಾನ್ವಿತೆ ಎಂದು ಈಗಾಗಲೇ ಸಾಬೀತುಪಡಿಸಿದ್ದಾರೆ. ಇವರು ರಶ್ಮಿಕಾ ಮಂದಣ್ಣ ನಟಿಯಾಗಿರುವ ಚಿತ್ರದಲ್ಲಿ ಅಲ್ಲು ಅರ್ಜುನ್ ಜತೆ ಕಿಸ್ಸಿಕ್ ಎಂದು ಡ್ಯಾನ್ಸ್ ಮಾಡಿದ್ದಾರೆ. ಈಕೆಯ ಡ್ಯಾನ್ಸ್ ರಸಿಕರ ಗಮನ ಸೆಳೆಸಿದೆ. ಈ ಮೂಲಕ ಭಾರತದ ಜನಪ್ರಿಯ ನಟಿಯರಲ್ಲಿ ಈಕೆ ಒಬ್ಬರಾಗುವ ಎಲ್ಲಾ ಸೂಚನೆ ದೊರಕಿದೆ.