Latest Kannada Nation & World
ಬಘೀರ ಮಾತ್ರವಲ್ಲ ಒಟಿಟಿಯಲ್ಲಿ ಈ ವಾರ 35 ಸಿನಿಮಾ ಬಿಡುಗಡೆ, ಥ್ರಿಲ್ಲರ್, ಹಾರರ್, ಬೋಲ್ಡ್ ಚಿತ್ರಗಳ ದರ್ಬಾರ್!

OTT release movies today: ಇಂದು (ನವೆಂಬರ್ 22) ಶುಕ್ರವಾರ ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಆಹಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಸಿನಿಮಾ, ಜೀ5 ಸೇರಿದಂತೆ ಹಲವು ಒಟಿಟಿಗಳಲ್ಲಿ ಸಾಕಷ್ಟು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲಿಷ್ ಸಿನಿಮಾಗಳು ರಿಲೀಸ್ ಆಗಿವೆ. ಒಟ್ಟು 35 ಸಿನಿಮಾಗಳು ಈ ವಾರ ಬಿಡುಗಡೆಯಾಗಿದೆ. ಹಾರರ್, ಬೋಲ್ಡ್ , ವೈಜ್ಞಾನಿಕ ಥ್ರಿಲ್ಲರ್, ಸೇಡು ತೀರಿಸಿಕೊಳ್ಳುವ ಕ್ರೈಮ್ ಥ್ರಿಲ್ಲರ್ ಮತ್ತು ಹಲವು ಪ್ರಕಾರದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ರಿಲೀಸ್ ಆಗಿವೆ. ಕನ್ನಡಿಗರಿಗೆ ಈ ಬಾರಿ ಖುಷಿಯಾಗುವಂತಹ ಸುದ್ದಿಯಿದೆ. ಅಪರೂಪಕ್ಕೆ ನಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಸಿನಿಮಾವೊಂದು ಬಿಡುಗಡೆಯಾಗಿದೆ. ರಾಘವೇಂದ್ರ ರಾಜ್ ಕುಮಾರ್ ನಟನೆಯ, ಹೊಂಬಾಳೆ ಫಿಲ್ಮ್ಸ್‌ನ ಬಘೀರ ಸಿನಿಮಾ ರಿಲೀಸ್ ಆಗಿದೆ.