ಬಲೂಚಿಸ್ತಾನ ಎಲ್ಲಿದೆ, ಬಿಎಲ್‌ಎ ಎಂದರೇನು, ಪಾಕ್‌ನೊಂದಿಗೆ ಅವರಿಗೇನು ತಕರಾರು; 5 ಅಂಶಗಳ ವಿವರಣೆ

ಭಾರತ, ಅಫ್ಘಾನಿಸ್ತಾನ, ಇರಾನ್, ಚೀನಾ, ಪಾಕ್ ಮತ್ತು ಬಲೂಚಿಸ್ತಾನ
ಭಾರತ, ಅಫ್ಘಾನಿಸ್ತಾನ, ಚೀನಾ, ಪಾಕ್ ಮತ್ತು ಬಲೂಚಿಸ್ತಾನ, ಇರಾನ್ ನೆರೆಹೊರೆಯಲ್ಲಿರುವಂಥವು. ರಾಜಕೀಯವಾಗಿ, ಭೌಗೋಳಿಕವಾಗಿ ತಮ್ಮದೇ ಆದ ಲೆಕ್ಕಾಚಾರದಿಂದಿಗೆ ಈ ಭಾಗದಲ್ಲಿ ಪ್ರಾಬಲ್ಯ ಸಾಧಿಸುವ ಪ್ರಯತ್ನ ನಡೆದೇ ಇದೆ. ಭಾರತವನ್ನು ಮಣಿಸಬೇಕು ಎಂಬ ಲೆಕ್ಕಾಚಾರದೊಂದಿಗೆ ಚೀನಾ ಹಿಂದೂ ಮಹಾ ಸಾಗರದ ಭಾಗದಲ್ಲೂ ತನ್ನ ಸೇನಾ ನೆಲೆ ಬಲಪಡಿಸುವ ಕೆಲಸ ಮಾಡಿದೆ. ಬಲಿಷ್ಠ ರಾಷ್ಟ್ರವಾಗಿ ಚೀನಾ ಈಗಾಗಲೇ ಪಾಕಿಸ್ತಾನವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಹೀಗಾಗಿ ಚೀನಾದ ಬೆಲ್ಟ್ ರೋಡ್ ಉಪಕ್ರಮ ಬಹುಬೇಗನೆ ಅಲ್ಲಿ ಜಾರಿಯಾಗಿದೆ. ಭಾರತ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು. ಚೀನಾ ಬೆಲ್ಟ್ ರೋಡ್ ಉಪಕ್ರಮದ ಭಾಗವಾಗಿ ಪಾಕಿಸ್ತಾನದ ಬಲೂಚ್ ಪ್ರಾಂತ್ಯದ ಗ್ವಾದಾರ್‌ನಲ್ಲಿ ಬಂದರು, ಸೇನಾ ನೆಲೆ ಎಲ್ಲವನ್ನೂ ಸ್ಥಾಪಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ಮತ್ತು ಇರಾನ್ ತಮ್ಮ ಸಂಬಂಧ ಬಲಗೊಳಿಸಿದ್ದು, ಚಾಹ್‌ಬರ್ ಬಂದರು ಅಭಿವೃದ್ಧಿ ಮತ್ತು ಬಳಸಿಕೊಳ್ಳುವುದಕ್ಕೆ ಒಪ್ಪಂದ ಮಾಡಿಕೊಂಡಿವೆ. ಇನ್ನು ಅಫ್ಘಾನಿಸ್ತಾನದಲ್ಲಿ ಸದ್ಯ ತಾಲೀಬಾನ್ ಆಡಳಿತ ಇದ್ದು, ಅದಕ್ಕೂ ಮೊದಲು ನಾಗರಿಕ ಆಡಳಿತ ಇದ್ದಾಗ ಭಾರತ ಹೆಚ್ಚಿನ ನೆರವನ್ನು ನೀಡಿತ್ತು. ಅಫ್ಘಾನಿಸ್ತಾನ ಹಾಗೂ ಇರಾನ್ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಬಲೂಚಿಸ್ತಾನ್ ವಿಮೋಚನಾ ಸಂಘಟನೆ ನಾಯಕರು ಭಾರತದ ಜತೆಗೂ ಸಂಪರ್ಕ ಸಾಧಿಸಿದ್ದರು ಎಂಬ ಅಂಶವನ್ನು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.