Astrology
ಭಗವದ್ಗೀತೆಯಲ್ಲಿನ ಈ 5 ಸಂದೇಶಗಳು ಭರವಸೆ ಮೂಡಿಸುತ್ತವೆ

ಭಗವದ್ಗೀತೆಯು ಕೇವಲ ಅಧ್ಯಾತ್ಮಿಕ ಗ್ರಂಥವಲ್ಲ. ಕಷ್ಟದ ಸಮಯದಲ್ಲಿ ಪ್ರೇರಣೆ, ಭರವಸೆ ನೀಡುವ ಬೆಳಕಿನ ಕಿರಣವಾಗಿದೆ. ಭಗವದ್ಗೀತೆಯು ಪ್ರಾಪಂಚಿಕ ಜೀವನದಲ್ಲಿ ಅಡಕವಾಗಿರುವ ಆಳವಾದ ರಹಸ್ಯವನ್ನು ನಮಗೆ ತಿಳಿಸಿಕೊಡುತ್ತದೆ. ಅರ್ಜುನನ ದುಃಖವನ್ನು ತೊಡೆದು ಹಾಕುವ ಕೆಲಸವನ್ನು ಮಾಡಿದ ಭಗವದ್ಗೀತೆಯು ಇಂದಿನ ದಿನಗಳಲ್ಲೂ ಸಹ ದುಃಖದಿಂದ ಹೊರಬರಲು ಇರುವ ದಾರಿದೀಪವಾಗಿದೆ. ಗೀತೆಯು ಮಾನವರಿಗೆ ಉತ್ತಮ ಮಾರ್ಗದರ್ಶಿಯಾಗಿದೆ. ಜೀವನದ ಯಾವುದಾದರೊಂದು ಸಮಯದಲ್ಲಿ ದುಃಖ, ಖಿನ್ನತೆಗಳು ಕಾಡಬಹುದು. ಜೀವನದುದ್ದಕ್ಕೂ ಯಾವಾಗಲೂ ಸುಖ, ಸಂತೋಷಗಳೇ ತುಂಬಿರುವುದಿಲ್ಲ. ಅಂತಹ ಸಮಯದಲ್ಲಿ ಇವುಗಳನ್ನು ದೂರಮಾಡುವ ಪ್ರೋತ್ಸಾಹ ಅಗತ್ಯವಿರುತ್ತದೆ. ಗೀತೆಯಲ್ಲಿರುವ ಈ ಐದು ಉಪದೇಶಗಳು ಕಷ್ಟದ ಸಮಯದಲ್ಲಿ ಭರವಸೆಯ ಕಿರಣವಾಗಿ ಜೀವನಕ್ಕೆ ಹೊಸ ಬೆಳಕನ್ನು ತರುತ್ತವೆ.