Latest Kannada Nation & World
ಭಾಜಿರಾವ್ ಮಸ್ತಾನಿ ಸಿನಿಮಾದ ತುಣುಕಿನ ಡೀಪ್ಫೇಕ್ ವಿಡಿಯೋ ವೈರಲ್, ಹೊಸ ಜಗತ್ತಿಗ ಸ್ವಾಗತ! ವಿಕ್ರಮ್ ಜೋಶಿ ಬರಹ

ಈಗ ವಿಷಯಕ್ಕೆ ಬರುತ್ತೇನೆ. ಈ ವಿಡಿಯೋ ತುಣಕನ್ನು ಭಾಜಿರಾಬ್ ಮಸ್ತಾನಿ ಸಿನೇಮಾದ ಒಂದು ಹಾಡಿನಿಂದ ಕದ್ದು ಅದರಲ್ಲಿಯ ನಾಯಕ ನಟನಾಗಿರುವ ರಣವೀರ್ ಸಿಂಘ್ ಅವರ ಬದಲು ಕಾಶ್ ಪಟೇಲ್ ಅವರ ಮುಖವನ್ನು ಡೀಪ್ಫೇಕ್ ಮಾಡಲಾಗಿದೆ. ಹಾಡು, ಸಂಗೀತ, ಲಯ, ತಾಳ, ಕುಣಿತ, ಎಲ್ಲವೂ ಆ ಸಿನೇಮಾದ್ದೇ. ಈಗ ನಾವು ಪ್ರಶ್ನಿಸಬೇಕಾಗಿದ್ದು – ಈ ವಿಡಿಯೋದ ಎಡಿಟಿಂಗ್ ಹಕ್ಕನ್ನು ಅವರಿಗೆ ಕೊಟ್ಟವರು ಯಾರು? ಒಂದು ಜವಾಬ್ದಾರಿಯುತ ರಾಷ್ಟ್ರದ, ಉನ್ನತ ಹುದ್ದೆಯ ವ್ಯಕ್ತಿಯೇ ಹೀಗೆ ಮಾಡುತ್ತಾರೆ ಎಂದರೆ ನಾವು ಯಾವ ಕಾಲಘಟ್ಟದಲ್ಲಿದ್ದೇವೆ?