Latest Kannada Nation & World
ಭಾರತದ ಉದಯೋನ್ಮುಖ ತಾರೆಗೆ ಶೇ 5400 ರಷ್ಟು ವೇತನ ಹೆಚ್ಚಳ, 55 ಪಟ್ಟು ಹೆಚ್ಚುವರಿ ಗಳಿಕೆ; ಇದು ಐಪಿಎಲ್ ಹರಾಜು ದಾಖಲೆ!

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ರಿಷಭ್ ಪಂತ್ (27 ಕೋಟಿ ರೂ), ಶ್ರೇಯಸ್ ಅಯ್ಯರ್ (26.5 ಕೋಟಿ ರೂ), ವೆಂಕಟೇಶ್ ಅಯ್ಯರ್ (24.75 ಕೋಟಿ) ಅಧಿಕ ಮೊತ್ತ ಪಡೆಯುವ ಮೂಲಕ ದುಬಾರಿ ಆಟಗಾರರಾಗಿದ್ದಾರೆ. ಇವರ ಜೊತೆಗೆ ಬಹುತೇಕ ಆಟಗಾರರು ಕಳೆದ ವರ್ಷಕ್ಕೆ ಹೋಲಿಸಿದರೆ ಡಬಲ್ ಹಣವನ್ನು ಜೇಬಿಗಿಳಿಸಿಕೊಂಡಿದ್ದಾರೆ. ಈ ಪೈಕಿ ಬಹುತೇಕ ಭಾರತೀಯರೇ ಇರುವುದು ವಿಶೇಷ. ಯಾವುದೇ ವಿದೇಶಿ ಆಟಗಾರ 16 ಕೋಟಿಗೆ ಮಾರಾಟವಾಗಿಲ್ಲ. ಈ ಬಾರಿ ಜೋಸ್ ಬಟ್ಲರ್ ಅತ್ಯಂತ ದುಬಾರಿ ವಿದೇಶಿ ಆಟಗಾರನಾಗಿದ್ದು, ಅವರನ್ನು ಗುಜರಾತ್ ಟೈಟಾನ್ಸ್ 15.75 ಕೋಟಿ ರೂ.ಗೆ ತಂಡಕ್ಕೆ ಸೇರಿಸಿದೆ.