Latest Kannada Nation & World
ಮತ್ತೊಮ್ಮೆ ಹದಗೆಟ್ಟಿದ ವಿನೋದ್ ಕಾಂಬ್ಳಿ ಆರೋಗ್ಯ, ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು ಸಚಿನ್ ಆಪ್ತನಿಗೆ?
Vinod Kambli Health Update: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಆಪ್ತ ಸ್ನೇಹಿತ ವಿನೋದ್ ಕಾಂಬ್ಳಿ ಅವರ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದೆ. ಅವರನ್ನು ಥಾಣೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲಾ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವೈದ್ಯರು ಅವರನ್ನು ನಿಗಾದಲ್ಲಿ ಇರಿಸಿದ್ದಾರೆ. ಇತ್ತೀಚೆಗೆ ತಮ್ಮ ಕೋಚ್ ಆಗಿದ್ದ ರಮಾಕಾಂತ್ ಆಚ್ರೇಕರ್ ಅವರ ಸ್ಮರಣಾರ್ಥ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿನ್ರನ್ನು ಭೇಟಿ ಮಾಡಿ ಸುದ್ದಿಯಾಗಿದ್ದ ಕಾಂಬ್ಳಿ ಮತ್ತೊಮ್ಮೆ ತೀವ್ರ ಅನಾರೋಗ್ಯಕ್ಕೆ ಸಿಲುಕಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಡಿತದ ವ್ಯವಸದಿಂದ ಸಾಕಷ್ಟು ಬಳಲುತ್ತಿದ್ದ ಕಾಂಬ್ಳೆ ಅವರು ಈ ಹಿಂದೆ 14 ಬಾರಿ ರಿಹ್ಯಾಬ್ಗೆ ಹೋಗಿದ್ದರು.