Astrology
ಮಾರ್ಚ್ನಲ್ಲಿ ಸಂಭವಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ; ಭಾರತದಲ್ಲೂ ಗೋಚರವಾಗುತ್ತಾ, ದಿನಾಂಕ, ಸಮಯದ ವಿವರ ಇಲ್ಲಿದೆ

ಸೂರ್ಯಗ್ರಹಣ ಯಾವಾಗ ಮತ್ತು ಎಲ್ಲಿ ಗೋಚರಿಸುತ್ತದೆ?
ಮೊದಲೇ ಹೇಳಿದಂತೆ ಮಾರ್ಚ್ 29 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಇದು UTC ಸಮಯ 8.50 ರಿಂದ 12.43 ರವರೆಗೆ (EDT ಸಮಯ 4.50 ರಿಂದ 8.43 ರವರೆಗೆ) ಗೋಚರಿಸುತ್ತದೆ. ಡೇಟ್ ಅಂಡ್ ಟೈಮ್ ವೆಬ್ಸೈಟ್ ಪ್ರಕಾರ, 814 ಮಿಲಿಯನ್ ಜನರು ಈ ಭಾಗಶಃ ಸೂರ್ಯಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಭಾರತೀಯ ಕಾಲಮಾನ ಮಧ್ಯಾಹ್ನ 2:20 ಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಿ ಸಂಜೆ 6.16 ಕ್ಕೆ ಕೊನೆಗೊಳ್ಳಲಿದೆ.ಈ ಸೂರ್ಯಗ್ರಹಣವು ವಾಯುವ್ಯ ಆಫ್ರಿಕಾ, ಉತ್ತರ ಅಮೆರಿಕದ ಈಶಾನ್ಯ ಭಾಗಗಳು, ಯುರೋಪ್ ಮತ್ತು ಉತ್ತರ ರಷ್ಯಾದಲ್ಲಿ ಗೋಚರಿಸಲಿದೆ. ಇದು ಕೆನಡಾ, ಪೋರ್ಚುಗಲ್, ಸ್ಪೇನ್, ಐರ್ಲೆಂಡ್, ಫ್ರಾನ್ಸ್, ಯುನೈಟೆಡ್ ಕಿಂಗ್ಡಮ್, ಡೆನ್ಮಾರ್ಕ್, ಜರ್ಮನಿ, ನಾರ್ವೆ, ಫಿನ್ಲ್ಯಾಂಡ್ ಮತ್ತು ರಷ್ಯಾದಿಂದ ಗೋಚರಿಸುತ್ತದೆ. ಈ ದೇಶಗಳಲ್ಲಿ ಮೇಲೆ ಸೂರ್ಯಗ್ರಹಣದ ಪರಿಣಾಮ ಇರಲಿದೆ.