Latest Kannada Nation & World
ಮೂರನೇ ಏಕದಿನದಲ್ಲಿ 142 ರನ್ನಿಂದ ಸೋತ ಕ್ರಿಕೆಟ್ ಜನಕರು; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ

ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಮನಮೋಹಕ ಶತಕ (112) ಮತ್ತು ಬೌಲರ್ಗಳ ಮಾರಕ ಬೌಲಿಂಗ್ ಬಲದಿಂದ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧಿಸಿದೆ. ರೋಹಿತ್ ಪಡೆ ನೀಡಿದ್ದ 356 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಲು ವಿಫಲವಾದ ಇಂಗ್ಲೆಂಡ್ 142 ರನ್ಗಳಿಂದ ಸೋಲೊಪ್ಪಿಕೊಂಡು ಮುಖಭಂಗಕ್ಕೆ ಒಳಗಾಯಿತು. ಇಂಗ್ಲೆಂಡ್ ವಿರುದ್ಧ ಭಾರತಕ್ಕಿದು ಎರಡನೇ ಅತಿ ದೊಡ್ಡ ಏಕದಿನ ಗೆಲುವು. ಕ್ರಿಕೆಟ್ ಜನಕರು ಭಾರತದ ನೆಲದಲ್ಲಿ ಟಿ20 ಸರಣಿಯ ಜೊತೆಗೆ ಏಕದಿನ ಸಿರೀಸನ್ನೂ ಕಳೆದುಕೊಂಡು ನಿರಾಸೆಯೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ಹೋಗುತ್ತಿದ್ದಾರೆ. ಆದರೆ ಆಟಗಾರರ ಸಂಘಟಿತ ಹೋರಾಟ ಮತ್ತು ಈ ಗೆಲುವು ಮೆನ್ ಇನ್ ಬ್ಲ್ಯೂ ಆತ್ಮ ವಿಶ್ವಾಸವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.