Latest Kannada Nation & World
ಮೂಲ ಬೆಲೆ 30 ಲಕ್ಷದಿಂದ 6 ಕೋಟಿ ಜಾಕ್ಪಾಟ್ನೊಂದಿಗೆ ಆರ್ಸಿಬಿ ಪಾಲಾದ ರಸಿಖ್ ಸಲಾಮ್ ದಾರ್ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ ರಸಿಖ್ ಸಲಾಮ್ ದಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 6 ಕೋಟಿ ರೂಪಾಯಿಗೆ ಖರೀದಿಸಿದೆ. 30 ಲಕ್ಷ ರೂಪಾಯಿ ಮೂಲ ಬೆಲೆಯಲ್ಲಿ ಆಕ್ಷನ್ ಪೂಲ್ ಪ್ರವೇಶಿಸಿದ 24 ವರ್ಷದ ಅನ್ಕ್ಯಾಪ್ಡ್ ಪ್ಲೇಯರ್ ಖರೀದಿಗೆ ಆರ್ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಜಿದ್ದಿಗೆ ಬಿದ್ದು ಪೈಪೋಟಿ ನಡೆಸಿದವು. ಉಭಯ ಫ್ರಾಂಚೈಸಿಗಳು ರಸಿಖ್ ದಾರ್ ಖರೀದಿಗೆ ಪ್ರಬಲ ಪೈಪೋಟಿ ನೀಡಿದವು. ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ರೈಟ್-ಟು ಮ್ಯಾಚ್ (ಆರ್‌ಟಿಎಂ) ಬಳಸಲು ನಿರ್ಧರಿಸಿತು. ಆದರೆ, ಆರ್ಸಿಬಿ ರಸಿಖ್ ಬೆಲೆ 6 ಕೋಟಿಗೆ ನಿಗದಿಪಡಿಸಿದ ಕಾರಣ ಡೆಲ್ಲಿ ಹಿಂದೆ ಸರಿಯಿತು.