Latest Kannada Nation & World
ರಾಜಸ್ಥಾನ ರಾಯಲ್ಸ್‌ಗೆ ದೊಡ್ಡ ಹೊಡೆತ, ಐಪಿಎಲ್ಗೂ ಮುನ್ನ ಸಂಜು ಸ್ಯಾಮ್ಸನ್ ಬೆರಳು ಮುರಿತ, ರಣಜಿಗೆ ಅಲಭ್ಯ; ವರದಿ

‘ಸ್ಯಾಮ್ಸನ್ ಅವರ ಬಲ ತೋರು ಬೆರಳಿಗೆ ಮೂಳೆ ಮುರಿತವಾಗಿದೆ. ಐದರಿಂದ ಆರು ವಾರಗಳ ಕಾಲ ಎನ್ಸಿಎನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲಿದ್ದಾರೆ. ಆದ್ದರಿಂದ ಫೆಬ್ರವರಿ 8 ರಿಂದ ಪುಣೆಯಲ್ಲಿ ಕೇರಳ ತಂಡದ ಪರ (ಜಮ್ಮು-ಕಾಶ್ಮೀರ ವಿರುದ್ಧ) ರಣಜಿ ಟ್ರೋಫಿ ಕ್ವಾರ್ಟರ್-ಫೈನಲ್ನಲ್ಲಿ ಸಂಜು ಆಡುವುದು ಅನುಮಾನ’ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ. ಆದರೆ, ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಲು ಪುನರಾಗಮನ ಮಾಡಬಹುದು ಎಂದು ಇದೇ ಮೂಲಗಳು ತಿಳಿಸಿವೆ. ಒಂದು ವೇಳೆ ಗಾಯದ ಪ್ರಮಾಣ ಗಂಭೀರವಾಗಿದ್ದರೆ, ಚಿಕಿತ್ಸೆಯ ಸಮಯ ವಿಸ್ತರಿಸಿದರೂ ಅಚ್ಚರಿ ಇಲ್ಲ.