ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸರಸ್ವತಿ ಯಂತ್ರವೇ ಪರಿಹಾರ; ಇದರ ಪ್ರಯೋಜನ, ಪೂಜಾಕ್ರಮ ತಿಳಿಯಿರಿ

ಪ್ರತಿಯೊಬ್ಬರಿಗೂ ತಮ್ಮ ಜೀವನ ನಡೆಸಲು ಉತ್ತಮ ವಿದ್ಯೆ ಇರಬೇಕು, ಇಲ್ಲವೆ ಉತ್ತಮ ಬುದ್ಧಿ ಇರಬೇಕು. ಆದ್ದರಿಂದ ಸರಸ್ವತಿ ಯಂತ್ರವನ್ನು ಧರಿಸುವುದು ಮತ್ತು ಪೂಜಿಸುವುದು ಒಳ್ಳೆಯದು. ಈ ಯಂತ್ರವನ್ನು ಧರಿಸುವ ಜೊತೆಯಲ್ಲಿ ಶ್ರೀಶಾರದ ಸ್ತೋತ್ರ, ಶ್ರೀಸರಸ್ವತಿ ಸ್ತೋತ್ರ ಅಥವಾ ಶ್ರೀದಕ್ಷಿಣಾಮೂರ್ತಿ ಸ್ತೋತ್ರಗಳನ್ನು ಜಪಿಸಬೇಕು. ಈ ಯಂತ್ರದಲ್ಲಿ ವಾಗ್ದೇವಿಗೆ ಸಂಬಂಧಿಸಿದ ಬೀಜಮಂತ್ರಗಳು ಇರುತ್ತವೆ. ಬೆಳ್ಳಿಯ ತಗಡಿನಲ್ಲಿ ಈ ಯಂತ್ರವನ್ನು ಬರೆಯುವುದು ಒಳ್ಳೆಯದು. ತಾಮ್ರದ ತಗಡಿನಲ್ಲಿ ಈ ಯಂತ್ರವನ್ನು ಬರೆಸಿದಲ್ಲಿ ಮಧ್ಯಮ ಮಟ್ಟದ ಅಥವಾ ನಿಧಾನಗತಿಯ ಫಲಿತಾಂಶಗಳು ದೊರೆಯುತ್ತವೆ. ಕೆಲವರಿಗೆ ಅನುಕೂಲವಿದ್ದರೂ ವಿದ್ಯಾಭ್ಯಾಸದಲ್ಲಿ ತೊಂದರೆ ಕಂಡುಬರುತ್ತದೆ. ಈ ಯಂತ್ರದಿಂದ ಕಲಿಕೆಯಲ್ಲಿ ಆಸಕ್ತಿ ಮೂಡುವುದಲ್ಲದೆ ಬುದ್ಧಿಶಕ್ತಿಯೂ ಹೆಚ್ಚುತ್ತದೆ. ಕೆಲಿತ ವಿಚಾರಗಳು ನೆನಪಿನಲ್ಲಿ ಉಳಿಯುತ್ತದೆ. ಈ ಯಂತ್ರದಲ್ಲಿ ರೇಖೆಗಳು, ಬಿಂದು ಮತ್ತು ಸಂಸ್ಕೃತದಲ್ಲಿನ ಮಂತ್ರಗಳ ಕೆಲ ಪದಗಳು ಅಡಕವಾಗಿರುತ್ತವೆ. ಜನ್ಮಕುಂಡಲಿಯಲ್ಲಿ ಬುಧ ಮತ್ತು ಗುರುಗ್ರಹಗಳು ಯುತಿಯಲ್ಲಿ ಇದ್ದಲ್ಲಿ ಅಥವಾ ಪರಸ್ಪರ ದೃಷ್ಠಿಯನ್ನು ಹೊಂದಿದ್ದಲ್ಲಿ ಸರಸ್ವತಿ ಯಂತ್ರದಿಂದ ವಿಶೇಷವಾದ ಫಲಗಳು ದೊರೆಯುತ್ತವೆ.